ದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಚುಟುಕು ಮಾದರಿ ಕ್ರಿಕೆಟಿಗೆ ವಿದಾಯ ಹೇಳಿ, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರೆಯುವುದು ಉತ್ತಮವೆಂದು ಮಾಜಿ ಆಟಗಾರ ವಿವಿಎಸ್‌ ಲಕ್ಷ್ಮಣ ಅಭಿಪ್ರಾಯಪಟ್ಟಿದ್ದಾರೆ.

ಕಿವೀಸ್‌ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಧೋನಿ ಅಸಡ್ಡೆತನದ ಆಟ ಭಾರತ ಸೋಲಲು ಕಾರಣ. ಹೀಗಾಗಿ ಧೋನಿ ನಿವೃತ್ತಿ ಘೋಷಿಸಿ ಹೊಸಬರಿಗೆ ದಾರಿ ಮಾಡಿಕೊಡಬೇಕೆಂದು ಸಲಹೆ ನೀಡಿದ್ದಾರೆ. ನನ್ನ ಪ್ರಕಾರ, ಟಿ-20 ಮಾದರಿಯಲ್ಲಿ ಯುವಕರಿಗೆ ಅವಕಾಶ ನೀಡಲು ಇದು ಸೂಕ್ತ ಸಮಯ. ಇದರಿಂದ ಯುವಕರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿ ಸಲು ಸಹಾಯಕವಾಗುತ್ತದೆ. ಜೊತೆಗೆ ಧೋನಿ ಏಕದಿನ ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 17-10-2018ರ ರಾಶಿ ಭವಿಷ್ಯ ಇಲ್ಲಿದೆ.

ಶನಿವಾರ ರಾಜ್‌ಕೋಟ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 40 ರನ್‌ಗಳಿಂದ ಸೋಲು ಅನುಭವಿಸಿತ್ತು. ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಮೈದಾನಕ್ಕಿಳಿದಿದ್ದ ಧೋನಿ ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದರು.

RELATED ARTICLES  ಗೋವಿನ ಉಳಿವಿಗೆ ಹಾಲು ಹಬ್ಬ.

ಶನಿವಾರ ನಡೆದ ಪಂದ್ಯದಲ್ಲಿ ಕೊಹ್ಲಿಗೆ ಸ್ಟ್ರೈಕ್‌ ನೀಡಲು ಧೋನಿ ಪ್ರಯತ್ನಿಸುತ್ತಿದ್ದರು. ಈ ಹಂತದಲ್ಲಿ ಕೊಹ್ಲಿಯ ಸ್ಟ್ರೈಕ್‌ರೇಟ್‌ 160 ಇದ್ದರೆ, ಧೋನಿದ್ದು 80 ಇತ್ತು. ಬೃಹತ್‌ ಮೊತ್ತ ಬೆನ್ನತ್ತಿದಾಗ ಈ ರೀತಿಯ ಬ್ಯಾಟಿಂಗ್‌ ಒಳ್ಳೆಯದಲ್ಲ. ಇನ್ನು ಲಕ್ಷ್ಮಣ್‌ ಅವರ ಅಭಿಪ್ರಾಯಕ್ಕೆ ಅಜಿತ್‌ ಅಗರ್ಕರ್‌ ಬೆಂಬಲಿಸಿದ್ದಾರೆ.