ಕಾರವಾರ: ನಗರದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಕುರಿತು ಖಚಿತ ಮಾಹಿತಿ ಪಡೆದ ಇಲ್ಲಿನ ಪೊಲೀಸರು ಭಾನುವಾರ ದಾಳಿ ನಡೆಸಿ, ಒಟ್ಟೂ 14 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಬಂಧಿತರಿಂದ 4 ಬೈಕ್‌ಗಳನ್ನು ಹಾಗೂ 18,340 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಶರಣಗೌಡ ಸಿ.ಎಚ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಜಾಂಬಾ ಕ್ರಾಸ್‌ನಲ್ಲಿ ಇಸ್ಪೀಟ್ ಆಡುತ್ತಿದ್ದ ಹಬ್ಬುವಾಡದ ಪ್ರವೀಣ, ವಿನಾಯಕ, ಸುನೀಲ್, ದಿಲೀಪ್ ಎಂಬುವವರನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ, 1,164 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಿರೇಗುತ್ತಿ ಹೈಸ್ಕೂಲ್ ಶೇಕಡಾ 84 ಫಲಿತಾಂಶ

ಇನ್ನು ನಂದನಗದ್ದಾದ ಇಸ್ಪೀಡ್ ಅಡ್ಡೆಯ ಮೇಲೆ ದಾಳಿ ನಡೆಸಿರುವ ನಗರ ಠಾಣೆಯ ಪೊಲೀಸರು ಶ್ಯಾಮ ಮೋಹನ್ ನಾಯ್ಕ, ಶ್ರವಣ ಶಿರೋಡಕರ್, ನಿತಿನ್ ಥಾಮ್ಸೆ, ಗಿತೇಶ್ ನಾಯ್ಕ, ಪಂಡರಿನಾಥ್ ಸಾರಂಗ, ಚಂದ್ರಕಾಂತ ಬಂಡರಗಿ, ದೀಪಕ ಕಲ್ಗುಟಕರ್, ತುಷಾರ್ ಥಾಮ್ಸೆ, ಸಂಜು ಗುರವ್, ಅಥುಲ್ ವೈಂಗಣಕರ್ ಎಂಬುವವರನ್ನು ಬಂಧಿಸಿ, 17,680 ರೂ. ನಗದು ಹಾಗೂ ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಎರಡೂ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರತ್ಯೇಕವಾಗಿ ಭಾಗಿಯಾಗಿದ್ದರು.

RELATED ARTICLES  ಯುವ ಪ್ರೇಮಿಗಳೊಂದಿಗೆ ಬಂದಿದ್ದ ವಿದೇಶಿಗ ವಸತಿಗೃಹದಲ್ಲಿಯೇ ಸಾವು.