ಮುಂಡಗೋಡ : ಹಿಂದು-ಮುಸ್ಲೀಂ ಭಾವಕ್ಯತೆ ಸಾರುವ ಪಟ್ಟಣದ ಖಾದರಲಿಂಗ್ ದರ್ಗಾ (ದೇವಸ್ಥಾನ)ಕ್ಕೆ ಭಾನುವಾರ ಖಾದರಲಿಂಗ್ ವಂಶಸ್ಥರು ಭೇಟಿನೀಡಿ ಪೂಜೆ ಸಲ್ಲಿಸಿದರು
ಖಾದರಲಿಂಗ್ ರ ವಂಶಸ್ಥರ ಪ್ರಯುಕ್ತ ದರ್ಗಾವನ್ನು ಹೂವುಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಮಾಡಲಾಗಿತ್ತು ಹಾಗೂ ಭಕ್ತಾಧಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆಂಧ್ರದ ಕರ್ನೂಲ್ ನಲ್ಲಿರುವ ಅವರ ವಂಶಸ್ಥರು ರವಿವಾರ ಸಂಜೆ ಖಾದರಲಿಂಗ್ ಗದ್ದುಗಿಗೆ ಮುಂಡಗೋಡ ಜಮಾತ್ ನ ಜೊತೆ ಫಾತೇಹ ಸಲ್ಲಿಸಿ ಮುಂಡಗೋಡ ಅಭಿವೃದ್ದಿ ಪಥದಲ್ಲಿ ಸಾಗಲಿ ಎಂದು ಸರ್ವಧರ್ಮದವರೆಲ್ಲರಿಗೂ ಹರಸಿದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರಲಿಂಗ್ ರ ವಂಶಸ್ಥ “ಅಲ್‍ಹಾಜ್ ಹಜರತ್ ಖ್ವಾಜಾ ಸಯ್ಯದ ಷಾ ಸಾಹೇಬ ಪೀರ್ ಹುಸೇನಿ ಚಿಸ್ತೀ ಜಾಗಿರದಾರ ಸಜ್ಜದ ನಸೀಮ ಮುತವಲ್ಲಿ” ಧರ್ಮದ ಹಾದಿಯಲ್ಲಿ ನಡೆದರೆ ದೇವರು ಎಂದು ಕೈಬಿಡಲಾರ. ಖಾದರಲಿಂಗ್ ವಂಶಸ್ಥರು ಜಾತಿಭೇದ ಮಾಡದೇ ಎಲ್ಲರ ಒಳತಿಗಾಗಿ ಪರಮಾತ್ಮನ ಹತ್ತಿರ ಪ್ರಾರ್ಥನೆ ಮಾಡಿದವರು ಮುಂಡಗೋಡದಲ್ಲಿ ಐಕ್ಯರಾದ ಖಾದರಲಿಂಗರ ಹೆಸರು ಸಾನಿ ಮಿರಾಂಜೆ ಖುದಾನಾಮಾ ಮಹ್ಮದ ಮಹ್ಮದುಲ್ ಹುಸೇನಿ ಚಿಸ್ತೀ ಉಲ್ ಖಾದರಿ ಲಿಂಗ್‍ಬಂದ್ ಜಗತ್ ಗುರು ಜಾಗಿರದಾರ ಉರುಫ್(ಅಲಿಯಾಸ್) ಖಾದರಲಿಂಗ್. ಜಗತ್‍ಗುರು ಎಂದರೆ ಜಗತ್ತಿನ ಎಲ್ಲ ಧರ್ಮದವರಿಗೆ ಬೋಧಿಸುವನೇ ಜಗತ್‍ಗುರು ಎಂದರು
ಖಾದರಲಿಂಗ್ ತಂದೆಗೆ ಐವರು ಗಂಡು ಮಕ್ಕಳಲ್ಲಿ ಮುಂಡಗೋಡದಲ್ಲಿರುವ ಖಾದರಲಿಂಗ 4 ನೇ ಮಗ. ಧರ್ಮದ ಕಾರ್ಯಗಳನ್ನು ಬೋಧಿಸುತ್ತಾ ಮುಂಡಗೋಡ ಬಂದು ದೇವರ ಸನ್ಮಾರ್ಗ ಕಾರ್ಯಗಳನ್ನು ಕೈಗೊಂಡು ಇಲ್ಲಿಯೇ ಐಕ್ಯರಾಗಿದ್ದಾರೆ ಎಂದರು.

RELATED ARTICLES  ಮುಖ್ಯಮಂತ್ರಿಗಳ ಪತ್ನಿಯಿಂದ ಗೋಕರ್ಣದಲ್ಲಿ ಪೂಜೆ ಸಲ್ಲಿಕೆ.

ಈ ಸಂದರ್ಭದಲ್ಲಿ ಸಯ್ಯದ ಮಹ್ಮದಿ ಹುಸೇನಿ ನಜಂಸಾಹೇಬ(ಬೀದರ), ಸಯ್ಯದ ಷಾ ಜೈನುಲ್ಲಾ ಅಬೆದನ್ ಅಲೈ ಮುನ್ನಾ ಪಾಷಾ ಕೌತಾ ಆಲಂ(ಆಂಧ್ರ), ಸಯ್ಯದ ಖ್ವಾಜಾ ಪೀರ ಹುಸೇನಿ ಕೌತಾ ಆಲಂ( ಆಂಧ್ರ) ಸಯ್ಯದ ಅಜರುದ್ದಿನ ಚಿಸ್ತೀ(ಹುಬ್ಬಳ್ಳಿ) ಸಯ್ಯದ ಇಮಾಮಸಾಬ ಚಿಸ್ತೀ(ಹುಬ್ಬಳ್ಳಿ), ಮುಸ್ತಾಕ ಹರಿಹರಕರ, ಸಯ್ಯದ ಅಸದುಲ್ಲಾ ಹುಸೇನಿ ಕೌತಾ ಆಲಂ, ಸಯ್ಯದ ಬಿಲಾಲುಲ್ಲಾ ಹುಸೇನಿ ಕೌತಾ ಆಲಂ, ಮುಂಡಗೋಡ ಮುಸ್ಲೀಂ ಹಿರಿಯ ಧುರಿಣ ಬಿ.ಎಫ್.ಬೆಂಡಿಗೇರಿ, ಮುಂಡಗೋಡ ಪಟ್ಟಣದ ಐದು ಮಸೀದಿಗಳ ಅಧ್ಯಕ್ಷರು ಸೇರಿದಂತೆ ಸಮಸ್ತ ಮುಸ್ಲೀಂ ಸಮಾಜ ಬಾಂದವರು ಉಪಸ್ಥಿತರಿದ್ದರು

RELATED ARTICLES  ಹೆಬಳೆಯ ಶೇಡಬರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಕಾರ್ತಿಕ ದೀಪೋತ್ಸವ