ಅಂಕೋಲಾ : ಇಂದಿನ ಯುವಕರು ಸಾಧಕರಾಗಬೇಕು. ಸಾಧನೆ ಮಾಡುವಾಗ ತಾವು ಕಲಿತ ಶಾಲೆ ತನ್ನ ಊರು ತನ್ನ ತಂದೆ ತಾಯಿಗಳು ಗುರು ಹಿರಿಯರನ್ನು ನೆನೆಯಬೇಕು. ಯುಥ್ ಪಾರ್ ಸೇವಾ ಸಂಘದ ಸದಸ್ಯ ನಾಗರಾಜ ಭಟ್ ಇದೆ ಶಾಲೆಯಲ್ಲಿ ಕಲಿತು ತಾನು ಕಲಿತ ಶಾಲೆಗೆ ಕೊಡುಗೆಯಾಗಿ ಶಾಲಾ ಪರಿಕರಗಳನ್ನು ಕೊಡುತ್ತಿರುವುದು ಶ್ಲಾಘನೀಯವಾದದ್ದು ಎಂದು ಜಿ.ಪ ಮಾಜಿ ಅಧ್ಯಕ್ಷ ರಮಾನಂದ ನಾಯಕ ಹೇಳಿದರು.ಅವರು ಹಿಚ್ಕಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯುಥ್ ಪಾರ್ ಸೇವಾ ಸಂಘದಿಂದ ಶಿಕ್ಷಣಕ್ಕೆ ಅಗತ್ಯವಿರುವ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಮಾತನಾಡಿದರು.
ಯುಥ್ ಪಾರ್ ಸೇವಾ ಸಂಘದ ಸದಸ್ಯ ನಾಗರಾಜ ಭಟ್ ತಾನು ಕಲಿತ ಶಾಲೆಗೆ ಕೊಡುಗೆಯಾಗಿ ಶಾಲಾ ಪರಿಕರಗಳನ್ನು ಶಾಲೆಗೆ ನೀಡುವ ಮೂಲಕ ುತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಪ್ರಮುಖರಾದ ಮಾಬ್ಲೇಶ್ವರ ಭಟ್ ಮಾತನಾಡಿ ತನ್ನ ಮಗ ಇದೆ ಶಾಲೆಯಲ್ಲಿ ಕಲಿತು ತಾನು ಓದಿದ ಶಾಲೆಯ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಸಾಮಗ್ರಿ ಕೊಡುತಿರುವುದು ಸಂತಸ ತಂದಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಸದಸ್ಯ ರವಿ ಆಚಾರ್ಯ, ವೆಂಕಟ್ರಮಣ ಆಗೇರ, ಕಲ್ಪನಾ ನಾಯಕ, ಲಲೀತಾ ಹರಿಕಂತ್ರ, ಶಾಲಾ ಶಿಕ್ಷಕ ಶಿವಲಿಂಗು ಗೌಡ್, ಗುರುರಾಜ ಭಟ್, ಗೀತಾ ಹರಿಕಂತ್ರ , ಮಾರುತಿ ನಾಯ್ಕ, ಜಯಲಕ್ಷ್ಮೀ ನಾಯ್ಕ ಉಪಸ್ಥಿತರಿದ್ದರು.ಮುಖ್ಯಾಧ್ಯಾಪಕ ಹಸನ ಶೇಖ ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಜಯಲಕ್ಷ್ಮೀ ನಾಯಕ ನಿರೂಪಿಸಿದರು, ಹೇಮಲತಾ ನಾಯಕ ವಂದಿಸಿದರು.