ಶಿರಸಿ : ಇಂದಿನ ಜನರು ಶೀಘ್ರದಲ್ಲಿ ಕೆಲಸ ವಾಗುವ ಎಲೆಕ್ಟ್ರಿಕಲ್ ಯಂತ್ರದತ್ತ ಮುಖ ಮಾಡಿದ್ದು ದಣಿವಿನ ಕೆಲಸಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಇಲ್ಲೊಂದು ಸುದ್ದಿ ತಕ್ಷಣದಲ್ಲಿ ಕೆಲಸ ಮಾಡುವ ಗೃಹೋಪಯೋಗಿ ವಸ್ತು ಕೂಡ ಅಪಾಯ ಎನ್ನುವ ಮುನ್ಸೂಚನೆ ನೀಡಿದಂತಿದೆ ಹೌದು ನಾವು ಮೊಬೈಲ್ ಸ್ಫೋಟ,ಗೀಜರ್ ಸ್ಪೋಟ,ಗ್ಯಾಸ್ ಸ್ಫೋಟ ಕೇಳಿದ್ದೇವೆ ಆದರೆ ಅಡುಗೆ ಮಾಡುವ ಮಿಕ್ಸರ್ ಕೂಡ ಸ್ಫೋಟಗೊಳ್ಳುವ ಮೂಲಕ ಜನರಲ್ಲಿ ಭಯ ಹುಟ್ಟಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಟ್ಟಣದ ಸಮೀಪದ ಊರಿನ ಎಸ್ .ವಿ. ಹೆಗಡೆ ಎನ್ನುವವರ ಮನೆಯಲ್ಲಿ ಇದ್ದಕ್ಕಿದ್ದಂತೆ ಅಡುಗೆ ಮಾಡಲು ಬಳಸುವ ಮಿಕ್ಸ್ ಸ್ಫೋಟಗೊಂಡಿದೆ. ಪ್ರತಿಷ್ಠಿತ ಕಂಪನಿಯ ಮಿಕ್ಸರಗಿದ್ದು ಈ ಸ್ಫೋಟದಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.

RELATED ARTICLES  ರೋಟರಾಕ್ಟ ಕ್ಲಬ್ ಮತ್ತು ಇಂಟರಾಕ್ಟ ಕ್ಲಬ್ ಇದರ ಇನಸ್ಟಾಲೇಶನ್ ಕಾರ್ಯಕ್ರಮ

ನಡೆದಿದ್ದು ಏನು?

ಮನೆಯ ಅಡುಗೆ ಕೋಣೆಯಲ್ಲಿ ಕೇವಲ ಮಿಕ್ಸರ್ ಕೇಬಲ್ ಸ್ವಿಚ್ ಹಾಕಿತ್ತು ಆದರೆ ಯಾವುದೇ ರೀತಿಯಾಗಿ ಮಿಕ್ಸರ್ ಆನ್ ಇರಲಿಲ್ಲ,ಆದರೂ ಕೂಡ ಒಂದೇ ಸಮನೆ ಮಿಕ್ಸರ್ ಸ್ಟಾರ್ಟ್ ಆಗಿದ್ದು ಕೆಲವೇ ನಿಮಿಷದಲ್ಲಿ ಬೆಂಕಿ ಹೊತ್ತಿಕೊಂಡು ಭಾರಿ ರೂಪದಲ್ಲಿ ಸ್ಫೋಟಗೊಂಡು ದಟ್ಟ ಹೊಗೆ ಆವರಿಸಿತ್ತು ,ಇದನ್ನು ಕಂಡು ಮನೆಯವರು ಅಡುಗೆ ಮನೆಗೆ ಧಾವಿಸಿ ಆಗಿರುವ ಘಟನೆ ತಿಳಿದು ಮನೆಯ ಮೇನ್ ಸ್ವಿಚ್ ಆಫ್ ಮಾಡಿ ಬೆಂಕಿಯಿಂದ ಆಗಬೇಕಾದ ಅಪಾಯ ತಪ್ಪಿಸಿದ್ದಾರೆ ಇದರಿಂದ ಪಕ್ಕದಲ್ಲಿರುವ ಕೆಲವು ವಸ್ತುಗಳು ಬೆಂಕಿಗೆ ಆಹುತಿ ಆಗಿದ್ದು ಮಿಕ್ಸರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ .

RELATED ARTICLES  ಸೆ. 21 ರಿಂದ ಶಾಲೆ ಆರಂಭ : ತರಗತಿ ಆರಂಭ ಆಗಲ್ಲ..!

ಮಿಕ್ಸರ್ ಸ್ಫೋಟಗಳಲ್ಲಿ ಕಾರಣ ತಿಳಿದು ಬಂದಿಲ್ಲ ಆದರೆ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ ಅಲ್ಲದೆ ಬೇರೆ ಅವಘಡಗಳು ಸಂಭವಿಸುತ್ತದೆ ಎನ್ನುವ ಆತಂಕ ಮಹಿಳೆಯರಲ್ಲಿ ಹುಟ್ಟಿದೆ. ಈ ಘಟನೆಯಿಂದದರೂ ಸಾರ್ವಜನಿಕರು ವಿದ್ಯುತ್ ಗೃಹೋಪಯೋಗಿ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ