ಗೋಕರ್ಣ: ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳಿಗೆ ವಿದೇಶಿಯರು ಮಾರು ಹೋಗುತ್ತಿದ್ದಾರೆ. ವೇದಾಧ್ಯಯನ, ಮಂತ್ರ ಪಠಣದಂತಹ ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿಕಂಡು ಕೊಂಡ ಕೆಲವ ರಷ್ಯನ್ ಪ್ರಜೆಗಳು ಕಾರವಾರದ ಗೋಕರ್ಣದ ಧಾರ್ಮಿಕ ಕೇಂದ್ರದಲ್ಲಿ ನೆಲೆಯೂರಿದ್ದಾರೆ.

RELATED ARTICLES  ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಶಿರಾಲಿಯಲ್ಲಿ ಪ್ರತಿಭಟನೆ: ಸಲ್ಲಿಕೆಯಾಯ್ತು ಮನವಿ.

ಒತ್ತಡ ಜೀವನದ ನಡುವೆ ಭಾರತೀಯ ಕಲೆಗಳಾದ ಯೋಗಾಭ್ಯಾಸದ ಧ್ಯಾನ, ಪ್ರಾಣಾಯಾಮಗಳು ಮಾತ್ರವಲ್ಲದೇ ಧಾರ್ಮಿಕ ವೇದಮಂತ್ರ ವಿದೇಶಿಗರನ್ನು ಆಕರ್ಷಿಸುತ್ತಿದೆ. ಈ ಕಾರಣಕ್ಕಾಗಿ ಅನೇಕ ವಿದೇಶಿಗರು ಗೋಕರ್ಣದಲ್ಲಿ ನೆಲಯೂರಿ ಸಂಸ್ಕೃತ ಪುಸ್ತಕಗಳನ್ನು ರಷ್ಯನ್ ಭಾಷೆಗೆ ತರ್ಜುಮೆ ಮಾಡಿಕೊಂಡು ವೇದಾಧ್ಯಯನದಲ್ಲಿ ತೊಡಗಿರುವ ದೃಶ್ಯ ಕಂಡು ಬರುತ್ತಿದೆ. ಕಡಲ ಕಿನಾರೆಯಲ್ಲಿ ಪ್ರತಿದಿನ ವೇದ, ಉಪನಿಷತ್ ಶ್ಲೋಕಗಳನ್ನು ಪಠಿಸುತ್ತಿರುವ ವಿದೇಶಿಗರ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ.

RELATED ARTICLES  ಯಶಸ್ವಿಯಾಗಿ ನಡೆದ 4ನೇ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾವಳಿ.