ಕಾರವಾರ: ಪತ್ರಕರ್ತೆ, ಸಾಹಿತಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಸಮುದಾಯದ ಹಿತ ಚಿಂತಕಿ ಬೆಂಗಳೂರಿನ ಗೌರಿ ಲಂಕೇಶರನ್ನು ದುಷ್ಕರ್ಮಿಗಳು ಗುಂಡಿಟ್ಟಿ ಹತ್ಯೆ ಮಾಡಿರುವುದಕ್ಕೆ ಎರಡು ತಿಂಗಳು ಗತಿಸಿದೆ. ಆದರೂ ಕೂಡ ಈವರೆಗೆ ಹಂತಕರ ಪತ್ತೆಯಾಗಿಲ್ಲ.‌ ಅವರ ಹಂತಕರನ್ನು ಬಂಧಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯಿಂದ ‘ನಾನೂ ಗೌರಿ’ ಪ್ರತಿರೋಧ ಸಮಾವೇಶವು ನಗರದ ನಗರಸಭೆ ಉದ್ಯಾನವನದ ಗಾಂಧಿ ಪ್ರತಿಮೆ ಎದುರು ಮಂಗಳವಾರ ನಡೆಯಿತು.

ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತನಾಡಿದ ರಮೇಶ ಅಂಕೋಲಾ, ಸಮಾವೇಶದಲ್ಲಿ ಕೂಡಿರುವ ಅಲ್ಪ ಜನಸಂಖ್ಯೆಯನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಗೌರಿ ಹತ್ಯೆ ಅದೊಂದು ಸಿದ್ಧಾಂತವನ್ನು ಹೊಸಕಿ ಹಾಕುವ ಪ್ರಯತ್ನವಾಗಿದೆ. ಜತೆಗೆ ವೈಚಾರಿಕತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಕೂಡ ಆಗಿದೆ. ಸ್ವಸ್ಥ ನಾಗರಿಕ ಸಮಾಜದಲ್ಲಿ ಮತ್ತು ಭಾರತದ ಸಂವಿಧಾನದಲ್ಲಿ ನಂಬಿಕೆ ಇರುವವರೆಲ್ಲರೂ ಈ ಘೋರ ಹತ್ಯೆಯನ್ನು ಖಂಡಿಸಬೇಕಿದೆ ಎಂದರು.

RELATED ARTICLES  ಉತ್ತರಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ವರ್ಗಾವಣೆ : ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ

ಬೆಂಗಳೂರಿನ ಚಿಂತಕ ಶಿವಸುಂದರ ಮಾತನಾಡಿ, ಗೌರಿಯ ಹತ್ಯೆ ನಡೆದು ಹೋಗಿದೆ. ಇದರಿಂದ ಇಡೀ ರಾಷ್ಟ್ರವೇ ಬೆಚ್ಚಿ ಬಿದ್ದಿದೆ. ಹತ್ಯೆ ನಡೆಸಿದವರು ಯಾರೇ ಆಗಿರಲಿ. ಎಷ್ಟೇ ಬಲಿಷ್ಠರಾಗಿರಲಿ ಅವರನ್ನು ಬಂಧಿಸುವುದು ಮತ್ತು ಶಿಕ್ಷಿಸುವುದು ಸರ್ಕಾರ ಮತ್ತು ಕಾನೂನಿನ ಕರ್ತವ್ಯ. ಸರ್ಕಾರ ಹಂತಕರನ್ನು ಶೀಘ್ರವೇ ಬಂಧಿಸಬೇಕು ಎಂದು ಎಲ್ಲರೂ ಆಗ್ರಹಿಸಬೇಕಿದೆ. ಒಬ್ಬ ಗೌರಿಯನ್ನು ಹತ್ಯೆ ಮಾಡಿದರೆ ಅವರ ವಿಚಾರಗಳನ್ನಂತೂ ಕೊಲ್ಲಲು ಸಾಧ್ಯವಿಲ್ಲ. ಹತ್ಯೆ ಮಾಡಿದ ಶಕ್ತಿಗಳು ಯಾವುದೇ ಇರಲಿ. ಅವರ ಮನಸ್ಥಿತಿ ಎಂಥದ್ದೇ ಇರಲಿ. ಅವರೆಲ್ಲರಿಗೂ ಮತ್ತೆ ಮತ್ತೆ ಕೇಳೊಸುವಂತೆ ‘ನಾನೂ ಗೌರಿ’ ಎಂದು ಕೂಗಿ ಹೇಳಬೇಕಾಗಿದೆ ಎಂದರು.

RELATED ARTICLES  ಅಸಹಾಯಕರಿಗೆ ಗೌಡ ಸಾರಸ್ವತ ಸಮಾಜದಿಂದ ಅಗತ್ಯ ನೆರವು; ವಿನೋದ ಪ್ರಭು

ರಾಷ್ಟ್ರಮಟ್ಟದ ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಜನಶಕ್ತಿ ವೇದಿಕೆಯ ಮಾಧವ ನಾಯಕ ಉಪಸ್ಥಿತರಿದ್ದರು.