ಹೊನ್ನಾವರ :ಹೊಸಾಕುಳಿಯ ಮಕ್ಕಿಗದ್ದೆಯ ಸುಬ್ರಾಯ ಗೌಡ ಅವರ ಮನೆಗೆ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಸುಟ್ಟುಹೋಗಿದ್ದು ಅನೇಕ ಗೃಹ ಸಾಮಗ್ರಿಗಳೂ ಕೂಡಾ ಸುಟ್ಟು ಭಸ್ಮವಾಗಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಸಂಕಷ್ಟದಲ್ಲಿದ್ದ ಸುಬ್ರಾಯ ಗೌಡ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದರೊಂದಿಗೆ ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಸುಬ್ರಾಯ ಗೌಡ ಅವರು ನೆರವಿನ ಹಸ್ತ ಚಾಚಿದ ನಾಗರಾಜ ನಾಯಕ ತೊರ್ಕೆ ಅವರಿಗೆ ತಮ್ಮ ಕಣ್ಣಿನಲ್ಲೇ ಭಾವನಾತ್ಮಕವಾಗಿ ಧನ್ಯವಾದ ತಿಳಿಸಿ ಕೃತಜ್ಞತೆ ಅರ್ಪಿಸಿದರು.
20171104 164059

RELATED ARTICLES  ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೋದ ಯುವತಿ ನಾಪತ್ತೆ

ಈ ಸಂದರ್ಭದಲ್ಲಿ ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಎನ್. ಎಸ್. ಹೆಗಡೆ, ಸಂದೇಶ ಶೆಟ್ಟಿ ಸೇರಿದಂತೆ ಅನೇಕ ಹಿರಿಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

RELATED ARTICLES  ಚುನಾವಣೆ ಅಂದಾಗ ಸೋಲು ಗೆಲುವು ಸಹಜ : ರೂಪಾಲಿ