ಹೈದರಾಬಾದ್: ಬಾಹುಬಲಿಯಲ್ಲಿ ದೇವಸೇನಾ ಆಗಿ ಮಿಂಚಿದ್ದ ಅನುಷ್ಕಾ ಶೆಟ್ಟಿ ಇಂದು 36 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಅನುಷ್ಕಾ ತಮ್ಮ ಕಾರ್ ಡ್ರೈವರ್ ಗೆ 12 ಲಕ್ಷ ರೂ. ಮೌಲ್ಯದ ಕಾರ್ ಒಂದನ್ನು ಉಡುಗೊರೆ ನೀಡಿದ್ದಾರೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 15-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಕಾರ್ ಡ್ರೈವರ್ ಅವರ ಕೆಲಸದ ನಿಷ್ಠೆ, ಪ್ರಾಮಾಣಿಕತೆಯನ್ನು ಮೆಚ್ಚಿರುವ ನಟಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನನ್ನನ್ನು ಚೆನ್ನಾಗಿ ಗಮನಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ನಾನು ಅವರಿಗೆ 12 ಲಕ್ಷ ಬೆಲೆಬಾಳುವ ಕಾರ್ ನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಅವರು ತಿಳಿಸಿದರು.

RELATED ARTICLES  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆಗೆ ‘ಜೈ ಶ್ರೀ ರಾಮ್​’ ವಾಕ್ಯ ಬರೆದಿರುವ 10 ಲಕ್ಷ ಕಾರ್ಡ್ ತಲುಪಲಿದೆ.

ಅನುಷ್ಕಾ ಮೂಲ ಹೆಸರು ಸ್ವೀಟಿ ಶೆಟ್ಟಿ ಎಂದಾಗಿದ್ದು ಬಾಹುಬಲಿಯಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ರಾಜಕುಮಾರಿಯಾಗಿದ್ದಾರೆ. ಅವರು 140 ಕೋಟಿ ಆಸ್ತಿ ಹೊಂದಿದ್ದಾರೆ. ಜತೆಗೆ ತಮ್ಮ ಸಿನಿಮಾಗೆ ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಾರೆ.