ಕುಮಟಾ: ಶಿಕ್ಷಣ ಎನ್ನುವುದು ನಮ್ಮ ಜೀವನದ ಉತ್ತಮ ಭವಿಷ್ಯಕ್ಕೆ ಬುನಾದಿ. ಶಿಕ್ಷಣ ನೀಡುವ ವಿದ್ಯಾ ಸಂಸ್ಥೆ ದೇಗುಲಕ್ಕೆ ಸಮಾನ. ಅಲ್ಲಿ ಎಲ್ಲಾರು ತಲೆ ಬಾಗಿಯೇ ನಡಿಯಬೇಕು, ಗುರುವೆಂದರೆ ದೇವರ ಸಮಾನ ಅಂತೆಲ್ಲಾ ಮಾತುಗಳು ಇವೆ, ಆದರೆ ಇತ್ತಿಚ್ಚಿನ ದಿನದಲ್ಲಿ ಶಾಲೆ ಎನ್ನುವುದು ಜಿದ್ದಾ ಜಿದ್ದಿನ ಅಖಾಡವಾಗುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ಹೌದು ಕುಮಟಾ ತಾಲೂಕಿನ ಮಿರ್ಜಾನ ಉರ್ದು ಶಾಲೆ ಇಂತದೊಂದು ಘಟನೆಗೆ ಸಾಕ್ಷಿಯಾಗಿದೆ.

ಈ ಶಾಲೆಯಲ್ಲಿ ಪಾಲಕರು ವರ್ಸಸ್ ಶಿಕ್ಷಕರ ಯುದ್ದ ನಡೆಯುತ್ತಿದೆ. ಈ ಯುದ್ದ ನೋಡಿ ಶಿಕ್ಷಣಾ ಇಲಾಖೆ ಮಜಾ ತೆಗೆದುಕೊಳ್ಳುತ್ತಿದೆ ಅನಿಸುತ್ತಿದೆ ಅಂತಿದ್ದಾರೆ ಸಾರ್ವಜನಿಕರು. ಹೌದು ಇಲ್ಲಿ ಜಮಾಯಿಸಿದ ಜನರು ವಿದ್ಯಾರ್ಥಿಗಳ ಪಾಲಕರ ಹೆಸರಿನಲ್ಲಿ ಬಂದವರು. ಕಾರಣ ಈ ಶಾಲೆಯ ಮುಖ್ಯಾಧ್ಯಾಪಕಿ ಸರಿಯಾಗಿ ಶಾಲೆ ನಡೆಸುತ್ತಿಲ್ಲ, ಸಹ ಶಿಕ್ಷಕರಿಗೆ ಕಿರುಕುಳ, ಮಕ್ಕಳಿಗು ಸಹ ಕಿರುಕುಳ ಎನ್ನುವ ಆರೋಪ ಅವರದ್ದು.

vlcsnap 2017 11 07 19h34m16s126
ಈ ವಿಷಯದಲ್ಲಿ ಶಾಲೆಯ ಕೆಲ ಶಿಕ್ಷಕರು ಕೂಡ ಪಾಲಕರಿಗೆ ಸಾಥ ನೀಡಿದ್ದಾರೆ. ಅಲ್ಲದೆ ಆ ಶಿಕ್ಷಕರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆರೋಪದ ವರದಿಯನ್ನು ಸಲ್ಲಿಸಿದ್ದಾರೆ. ಅದರಂತೆ ಕಾರವಾರದಿಂದ ವಿಷಯ ಪರಿವಿಕ್ಷಕರು,ಉರ್ದು ಶಿಕ್ಷಣಾ ಸಂಯೋಜಕರು,ಕುಮಟಾ ಶಿಕ್ಷಣಾಧಿಕಾರಿಗಳು ಶಾಲೆಗೆ ಆಗಮಿಸಿ ವಿಷಯ ಚರ್ಚೆ ನಡೆಸುತ್ತಿರುವಾಗ ನೂರಕ್ಕೂ ಹೆಚ್ಚಿನ ಉರ್ದು ಶಾಲಾ ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಆಗಮಿಸಿ ಅಧಿಕಾರಿಗಳನ್ನು ಮುತ್ತಿಗೆ ಹಾಕಿದ್ರು ಮತ್ತು ತಕ್ಷಣದಲ್ಲಿ ಮುಖ್ಯಾಧ್ಯಾಪಕಿಯನ್ನು ಮತ್ತು ದ್ಯಹಿಕ ಶಿಕ್ಷಕರನ್ನು ವರ್ಗವಣೆ ಗೊಳಿಸಿ,ಇಲ್ಲ ರಜೆ ಮೇಲೆ ಕಳಿಸಿ ಎಂದು ಒತ್ತಾಯಿಸಿ ಅಧಿಕಾರಗಳಗೆ ಪಟ್ಟು ಹಿಡಿದ್ರು. ಆದರೆ ಅಧಿಕಾರಿಗಳು ಮಾತ್ರ ನಮಗೆ ಅಧಿಕಾರ ಇಲ್ಲ ಮೇಲಾಧಿಕಾರಿಗಳಿಗೆ ತಿಳಿಸಿ ಮುಂದಿನ ಕ್ರಮ ಕ್ಯಗೊಳ್ಳುತ್ತೆನೆ ಎಂದು ಹೇಳಿದ್ರು.

RELATED ARTICLES  ಗೋಕರ್ಣದಲ್ಲಿ ಉಚಿತವಾಗಿ ನೀರು ವಿತರಿಸುವ ನಾಲ್ಕನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ

ಆದರೆ ಈ ಸಮಸ್ಯೆ ಇರುವುದು ಇಂದು ನಿನ್ನೆದಲ್ಲ ಸುಮಾರು ನಾಲ್ಕೈದು ವರ್ಷದಿಂದ ಈ ಸಮಸ್ಯೆ ಉದ್ಭವವಾಗಿದೆಯಂತೆ, ಇಸ್ಲಾಂ ಧರ್ಮದವರು ಇಲ್ಲಿ ಹಿಂದೂಗಳು ಇರಬಾರದು ಎನ್ನುವ ಉದ್ದೇಶದಿಂದ ಇತಂಹ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶಾಲಾ ಮುಖ್ಯಾಧ್ಯಾಪಕಿ ಶಾಲಿನಿ ನಾಯಕ ಮಾಧ್ಯಮಕ್ಕೆ ತಿಳಿಸಿದ್ರು. ಹೌದು ನಾನೂ ಸುಮಾರು 35 ವರ್ಷ ಶಿಕ್ಷಕಳಾಗಿ ಕೆಲಸ ಮಾಡಿದ್ದೆನೆ,ನನಗೆ ಎಲ್ಲಿಯು ಕೆಟ್ಟ ಹೆಸರು ಇಲ್ಲ, ಆದರೆ ಇಲ್ಲಿ ನಾನು ಸ್ವಚ್ಚತೆಗೆ, ಉತ್ತಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೆನೆ. ಇದು ಇಲ್ಲಿಯ ಕೆಲವು ಶಿಕ್ಷಕರಿಗೆ ಸಮಸ್ಯೆ ಆಗುತ್ತಿರಬಹುದು, ಅಲ್ಲದೆ ಶಾಲೆಯಲ್ಲಿ ಇಸ್ಲಾಂ ಧರ್ಮದ ಪಾರ್ಥನೆ ಮಾಡಲು ಮುಂದಾದಾಗ ನಾನೂ ಅದಕ್ಕೆ ಒಪ್ಪಿರಲಿಲ್ಲ ಅತಂಹ ಕಾರಣದಿಂದ ಗುಂಪುಗಾರಿಕೆಯ ಮೂಲಕ ನನಗೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ ಎಂದರು ಅಲ್ಲದೆ ನಾನೂ ಕೂಡ ಇಲ್ಲಿ ಕೆಲಸ ಮಾಡಲು ಇಚ್ಚಿಸುವುದಿಲ್ಲ.

RELATED ARTICLES  ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಆರೋಗ್ಯ ಸ್ಥಿತಿ ಗಂಭೀರ

ಒಟ್ಟಾರೆ ಮಿರ್ಜಾನ ಉರ್ದು ಶಾಲೆಯಲ್ಲಿ ಶಿಕ್ಷಕರ ಎತ್ತಂಗಡಿ ಕಾರ್ಯ ಜೋರಾಗಿಯೇ ನಡೆದಿದೆ. ಆದರೆ ಇಲ್ಲಿ ಇಷ್ಟೊಂದು ದೊಡ್ಡ ಸಮಸ್ಯೆಯಾಗಿ ಮುಂದಿನ ದಿದನಲ್ಲಿ ಈ ಸಮಸ್ಯೆ ಬೇರೊಂದು ರೂಪ ತಾಳುವ ಲಕ್ಷಣವಿದ್ದರು ಉಪನಿರ್ದೇಶಕರು ಯಾಕೇ ಸುಮ್ಮನಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ, . ಶೀಘ್ರದಲ್ಲಿ ಈ ಸಮಸ್ಯೆಗೆ ಪೂರ್ಣ ವಿರಾಮ ನೀಡದೆ ಇದ್ದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಮಾಜದ ಶಾಂತಿ ಕದಡುವಲ್ಲಿ ಎರಡು ಮಾತಿಲ್ಲ.