ಕಾರವಾರ: ಕೇಂದ್ರ ಸರಕಾರದ ನೋಟು ಅಮಾನೀಕರಣದ ನಿರ್ಣಯ ಕೈಗೊಂಡು ನವೆಂಬರ್ 8-ಕ್ಕೆ ಒಂದು ವರ್ಷ ಪೂರೈಸಲಿದ್ದು, ಅದರ ವಿರುದ್ಧ ಜನಸಾಮಾನ್ಯರಿಗಾಗುವ ಕಷ್ಟ ನಷ್ಟಗಳ ಕುರಿತು ರಾಷ್ಟ್ರಪತಿಗಳ ಗಮನ ಸೆಳೆಯಲು ನಾಳೆ ಬೆಳಿಗ್ಗೆ 11.30ಕ್ಕೆ ತಾಲೂಕಾ ಕಾಂಗ್ರೇಸ್ ಸಮಿತಿ ನಾಯಕರು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ನೀಡುವ ಮೂಲಕ “ಕರಾಳ ದಿನ”ವನ್ನು ಆಚರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಹಾಜರಿರಲಿದ್ದಾರೆ. ಆದ್ದರಿಂದ ಕಾಂಗ್ರೇಸ್ ಪಕ್ಷದ ಎಲ್ಲ ಶಾಸಕರು, ಅಂಗಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ತಪ್ಪದೇ ಭಾಗವಹಿಸಬೇಕಾಗಿ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಂಭು ಶೆಟ್ಟಿಯವರು ತಿಳಿಸಿದ್ದಾರೆ.

RELATED ARTICLES  ರೈತರಿಗಾಗಿ ಬಂದ ಲಕ್ಷಗಟ್ಟಲೇ ಹಣ ಗುಳುಂ? ದ್ವಿತೀಯ ದರ್ಜೆ ಗುಮಾಸ್ತನಿಂದ ರೈತರಿಗೆ ವಂಚನೆ

ಅದೇ ರೀತಿ ಕುಮಟಾದಲ್ಲಿಯೂ ಬ್ಲಾಕ್ ಕಾಂಗ್ರೇಸ್ ಸಮಿತಿ ಕುಮಟಾ ಇವರ ವತಿಯಿಂದ ನಾಳೆ ಬೆಳಿಗ್ಗೆ 10 – 30 ಕ್ಕೆ ಗಿಬ್ಬ್ ಸರ್ಕಲ್ ಬಳಿ ಭಾರತ ನರಳುತ್ತಿದೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಂಖಡರು ಅಭಿಮಾನಿಗಳು ಕಾಯ೯ಕತರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ.ವಿ. ಎಲ್. ನಾಯ್ಕ ತಿಳಿಸಿದ್ದಾರೆ.

RELATED ARTICLES  ಹೆಗಡೆಕಟ್ಟಾ ಪ್ರೌಢಶಾಲೆಯಲ್ಲಿ ದತ್ತಿನಿಧಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಆದರೆ ಬಿಜೆಪಿ ತನ್ನಸಾಧನೆಯ ಬಗ್ಗೆ ಹೇಳಿಕೊಳ್ಳುವ ಕಾರ್ಯಕ್ರಮ ಸಂಯೋಜಿಸುವ ಬಗ್ಗೆ ಯಾವುದೇ ವರದಿಗಳಿಲ್ಲ. ಎಲ್ಲೆಡೆಯಲ್ಲಿಯೂ ಬಿಜೆಪಿ ನೋಟು ಅಮಾನ್ಯೀಕರಣದ ವರ್ಷದ ಸಂತಸ ಆಚರಿಸುವ ನಿರೀಕ್ಷೆಗಳಿವೆ ಎಂದಾದರೂ ಯಾವುದೇ ಅಧಿಕೃತ ಹೇಳಿಕೆಗಳು ಇನ್ನೂ ಹೊರಬಂದಿಲ್ಲ.