ಮುಂಡಗೋಡ: ಜೀವ ಅಪಾಯಕ್ಕೆ ಅಹ್ವಾನ ನೀಡುತ್ತಿರುವ ಹರಿದ ವಿದ್ಯುತ್ ತಂತಿಗಳು ಹಾಗೂ ಕಂಬಗಳ ಕುರಿತು ಹಲವಾರು ಬಾರಿ ಸಾರ್ವಜನಿಕರು ಹೆಸ್ಕಾಂ ನಲ್ಲಿ ವಿನಂತಿಸಿದರು ಸಹಿತ ಹೆಸ್ಕಾಂ ಕಣ್ಣೆತ್ತಿ ಸಹ ನೋಡುತ್ತಿಲ್ಲಾ ಹೀಗಾದರೆ ಮುಂದೆ ಅವಘಡ ಸಂಭವಿಸಿದರೇ ಯಾರು ಹೊಣೆ ಆದಷ್ಟು ಬೇಗನೆ ತಂತಿ ಹಾಗೂ ಕಂಬಗಳನ್ನು ಸರಿಪಡಿಸಿ ಆಗಬಹುದಾದ ಅನಾಹುತ ತಪ್ಪಿಸಬೇಕೆಂದು ತಮ್ಮ ಅಳಲನ್ನು ಸಾರ್ವಜನಿಕರು ತೊಡಿಕೊಂಡಿದ್ದಾರೆ ಎಂದು ಜಿ.ಪಂ ಸದಸ್ಯ ರವಿಗೌಡ ಪಾಟೀಲರು ಹೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.ಇಲ್ಲಿನ ತಾಲೂಕಾ ಪಂಚಾಯಿತಿ ಸಭಾ ಭವನದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಡುತ್ತಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ ಪಟ್ಟಣದಲ್ಲಿ ಈಗಾಗಲೇ 1.23ಕೋಟಿ ಅನುದಾನ ಮಂಜೂರಾಗಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.

ಮುಂಡಗೋಡ ವಲಯದ ಅರಣ್ಯಪ್ರದೇಶ ಗುಂಜಾವತಿ ಅರಣ್ಯಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ತತ್ತರಿಸಿಹೋಗಿದ್ದು ಆನೆಗಳು ರೈತರ ಬೆಳೆ ನಾಶ ಮಾಡುತ್ತಿದೆ ಈ ಕುರಿತು ಏನು ಕ್ರಮಕೈಗೊಂಡಿದ್ದಿರಿ ಎಂದು ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮೀತಿಯ ಅಧ್ಯಕ್ಷ ಎಲ್.ಟಿ.ಪಾಟೀಲ ವಲಯ ಅರಣ್ಯಾಧಿಕಾರಿಗಳಿ ಸುರೇಶ ಕುಲ್ಲೋಳ್ಳಿಯವರಿಗೆ ಪ್ರಶ್ನೆಸಿದರು ಇದಕ್ಕೆ ಉತ್ತರನೀಡಿದ ವಲಯಅರಣ್ಯಾಧಿಕಾರಿ ಈಗಾಗಲೇ ಕಾಡಾನೆಗಳನ್ನು ಓಡಿಸಲು ಸಿಡಿಮದ್ದು, ಪಟಾಕಿಗಳನ್ನು ಉಪಯೋಗಿಸಲಾಗುತ್ತಿದೆ. ಆನೆಗಳನ್ನು ಓಡಿಸಲು ಇಲಾಖೆಗೆ ರೈತರ ಹಾಗೂ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆÀ. ಆನೆಗಳ ನಿಯಂತ್ರಿಸಲು 2 ವಾಹನಗಳು ಗಸ್ತು ತಿರುಗುತ್ತಿವೆ ಎಂದು ಉತ್ತರಿಸಿದರು.
ತಾಲೂಕಿನ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾದ ಮಾಹಿತಿ ಮತ್ತು ಸೇವೆಯನ್ನು ರೈತರಿಗೆ ಜನಸಾಮಾನ್ಯರಿಗೆ ಹಾಗೂ ಜನಪ್ರತಿನಿಧಿಗಳಿಗೆ ನೀಡುತ್ತಿಲ್ಲಾ. 5ರಿಂದ10 ನಿಮಿಷದ ಕೆಲಸಕ್ಕೆ ತಾಸುಗಟ್ಟಲೇ ನಿಲ್ಲಿಸಿಕೊಳ್ಳುತ್ತಾರೆ. ಈ ತೊಂದರೆಯನ್ನು ಶೀಘ್ರದಲ್ಲಿ ಇತ್ಯರ್ಥಮಾಡಲು ಮುಂದಿನ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಎಲ್ಲ ಜಿ.ಪಂ. ಹಾಗೂ ತಾ.ಪಂ. ಸದಸ್ಯರಿಗೆ ಆಹ್ವಾನಿಸಬೇಕೆಂದು ಜಿ.ಪಂ.ಸದಸ್ಯ ರವಿಗೌಡ ಪಾಟೀಲ್ ತಾಲೂಕ ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿಗಳಿಗೆ ಒತ್ತಾಯಿಸಿದರು.
ಇತ್ತೀಚೆಗೆ ಶಿಕ್ಷಣ ಇಲಾಖೆ ಅವರು ನಡೆಸುತ್ತಿರುವ ಕಾಮಗಾರಿಗಳ ಮತ್ತು ಕಾಮಗಾರಿಗಳ ಉದ್ಘಾಟನೆ ಕುರಿತು ಆ ಭಾಗದ ಜನ ಪ್ರತಿನಿಧಿಗಳಿಗೆ ತಿಳಸದೆ ಹಾಗೂ ತಾಲೂಕ ಪಂಚಾಯಿತಿ ಮತ್ತು ಜಿಲ್ಲಾಪಂಚಾಯಿತಿ ಸದಸ್ಯರ ಗಮನಕ್ಕೆ ತರದೆ ಮಾಡುತ್ತಿದ್ದಿರಿ ಎಂದು ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಹಿಗಾಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

RELATED ARTICLES  ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಜಿ.ಎಸ್. ನಾಯ್ಕ

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ತಾ.ಪಂ.ಕಾರ್ಯನಿರ್ವಣಾಧಿಕಾರಿ ಬಿ.ಎಲ್.ಬೈರವಾಡಗಿ, ತಾ.ಪಂ ಸದಸ್ಯರಾದ ಜರೀನಾಬಿ ನಾಗರೊಳ್ಳಿ, , ಜ್ಞಾನದೇವ ಗುಡಿಯಾಳ, ರಮೇಶ ರಾಯ್ಕರ, ಹುಸೇನಸಾಬ ದುಂಡಸಿ, ರಾಧಾಬಾಯಿ ಸಿಂಗನಳಿ,್ಳ ರೇಣುಕಾ ಕೋಡಣ್ಣವರ, ಗಣಪತಿ ಬೋವಿವಡ್ಡರ, ವಿವಿಧ ಇಲಾಖೆಗಳ ಅಧಿಕಾರಿಗಳು, ಹಾಜರಿದ್ದರು. ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ ನಿರೂಪಿಸಿ ವಂದಿಸಿದರು.

RELATED ARTICLES  ಚಿತ್ರಿಗಿ ಪ್ರೌಢಶಾಲೆ: 3 ರಂದು ವಾರ್ಷಿಕ ಸ್ನೇಹ ಸಮ್ಮೇಳನ