ಬೆಂಗಳೂರು: ನೋಟ್ ಬ್ಯಾನ್ ಮಾಡಿ ಇಂದಿಗೆ ಒಂದು ವರ್ಷ ಕಳೆದಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರವನ್ನ ಖಂಡಿಸಿ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮೌರ್ಯಸರ್ಕಲ್ ಬಳಿ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಖವಾಡ ಧರಿಸಿ ಅನುಕು ಪ್ರದರ್ಶನ ಮಾಡಿ ಕಿಡಿಕಾರಿದರು. ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿಂದ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ದೇಶದ ಅರ್ಥವ್ಯವಸ್ಥೆ ಕುಸಿದಿದೆ. ಬಿಜೆಪಿ ಹಠಾವೂ ಭಾರತ್ ಬಚಾವೂ ಎಂದು ಘೋಷಣೆ ಕೂಗಿ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES  ಟಿಪ್ಪು ವಾರ್ ಶುರು! ಪರಸ್ಪರ ಅಪಸ್ವರ! ಏನಾಗುತ್ತೋ ಮುಂದೆ...

ನೋಟ್ ಬ್ಯಾನ್ ಕ್ರಮ ಖಂಡಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಆನಂದರಾವ್ ಸರ್ಕಲ್ ಬಳಿಯಿಂದ ಪ್ರೀಡಂ ಪಾರ್ಕ್ ವರೆಗೆ ಕಾಂಗ್ರೆಸ್ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.

RELATED ARTICLES  ಜೇಸಿಐನ ಮಹಿಳಾ ಸಮ್ಮೇಳನದಲ್ಲಿ ಜೆಸಿಐ ಸೊರಬ ಸಿಂಧೂರ ಘಟಕಕ್ಕೆ ದ್ವಿತೀಯ ಸ್ಥಾನ !