ನವದೆಹಲಿ: ನರೇಂದ್ರ ಮೋದಿ ಸರ್ಕಾರ 500 ಹಾಗೂ 1ಸಾವಿರ ರು. ಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಗೊಳಿಸಿ 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರದಾನಿ ದೇಶದ ಜನತೆಗೆ ಧನ್ಯವಾದ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದೇಶದ ನಿರ್ಣಾಯಕ ಯುದ್ಧದಲ್ಲಿ 125 ಕೋಟಿ ಭಾರತೀಯರು ಹೋರಾಡಿ ಗೆದ್ದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದೊಂದು ಐತಿಹಾಸಿಕ ಯಶಸ್ಸು ಎಂದು ನರೇಂದ್ರ ಮೋದಿ ಬಣ್ಣಿಸಿದ್ದಾರೆ.

RELATED ARTICLES  ಭಾರತದ ಮೇಲಿನ ಇಸ್ರೇಲ್ ಪ್ರೀತಿಗೆ ಇದೊಂದು ಉದಾಹರಣೆ ಸಾಕು..!

ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಪ್ಪುಹಣ ವಿರುದ್ಧ ಸರ್ಕಾರದ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಭಾರತೀಯರಿಗೆ ತಲೆಬಾಗಿ ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

RELATED ARTICLES  ಶ್ರೀ ಸಂಕಲ್ಪ ಪೂರ್ಣ, ಕಾರ್ಯಕರ್ತರಲ್ಲಿ ಹರ್ಷ

ನವೆಂಬರ್ 8 2016 ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ ಸಾವಿರ ರು ನೋಟುಗಳನ್ನು ನಿಷೇಧಿಸಿ ರಾತ್ರೋರಾತ್ರಿ ಆದೇಶ ಹೊರಡಿಸಿದ್ದರು. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ನಿರ್ಣಾಯಕ ಯುದ್ಧ ಎಂದು ಇದನ್ನು ಕರೆದಿದ್ದರು.