ಬೆಂಗಳೂರು: ಕಳೆದ ಮೂರನೇ ತಾರೀಖಿನಂದು ವೈದ್ಯರ ಮುಷ್ಕರದಿಂದ ದಿನವಿಡೀ ಹೊರ ರೋಗಿ ಸೇವೆಗೆ ತೀವ್ರ ವ್ಯತ್ಯಯವಾಗಿದ್ದರೂ ಕೂಡ ಖಾಸಗಿ ವೈದ್ಯಕೀಯ ಸಂಸ್ಥೆಗಳಿಂದ ತೀವ್ರ ವಿರೋಧದ ಹೊರತಾಗಿಯೂ ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ(ತಿದ್ದುಪಡಿ) ಕಾಯ್ದೆ 2017ಕ್ಕೆ ತಿದ್ದುಪಡಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದೆ.

ನಿನ್ನೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್, ಭಾರೀ ಪ್ರತಿಭಟನೆಯ ನಂತರ ಇದೇ ಮೊದಲ ಬಾರಿಗೆ ಮಸೂದೆ ಬಗ್ಗೆ ಖಾಸಗಿ ವೈದ್ಯಕೀಯ ಸಂಸ್ಥೆಗಳು ಎತ್ತಿರುವ ಆತಂಕಗಳನ್ನು ನಿವಾರಿಸಲಿದ್ದು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಭೀತಿ ಆಧಾರರಹಿತವಾಗಿವೆ ಎಂದರು.

RELATED ARTICLES  ಖ್ಯಾತ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ.

ಇದೇ 13ರಂದು ವಿಧಾನಸಭೆಯ ಚಳಿಗಾಲ ಅಧಿವೇಶನ ಆರಂಭದ ದಿನ ಭಾರತೀಯ ವೈದ್ಯಕೀಯ ಸಂಘ ಬೆಳಗಾವಿ ಚಲೊಗೆ ಕರೆ ನೀಡಿದ್ದು ಅಲ್ಲಿ ಸುಮಾರು 25,000 ವೈದ್ಯರು ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ. ಮಸೂದೆಯನ್ನು ಜೂನ್ ತಿಂಗಳಲ್ಲಿ ಮಂಡಿಸಿದ ನಂತರ ಮತ್ತು ವಿಧಾನಸಭೆಯ ಜಂಟಿ ಆಯ್ಕೆ ಸಮಿತಿ ಪರೀಕ್ಷಿಸಿದ ನಂತರ ಹೆಚ್ಚಿನ ಬದಲಾವಣೆಗಳಾಗಿಲ್ಲ ಎಂದು ಆರೋಗ್ಯ ಸಚಿವರ ಹೇಳಿಕೆ ಸ್ಪಷ್ಟಪಡಿಸುತ್ತದೆ. ಭಾರತೀಯ ವೈದ್ಯಕೀಯ ಸಂಘದ ಬೇಡಿಕೆಗಳನ್ನು ಪರಿಶೀಲಿಸಲಾಗಿಲ್ಲ.

RELATED ARTICLES  ಕೆನರಾ ಸಂಸದ ಅನಂತ ಕುಮಾರ್ ಹೆಗಡೆ ಮೋದಿ ಸಂಪುಟ ಸೇರಿದ ಕ್ಷಣಗಳು.

ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ ರೋಗಿಗಳ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ಸಮನಾಗಿ ನೋಡಿಕೊಳ್ಳಲಾಗಿದೆ. ವೈದ್ಯಕೀಯ ಸಂಸ್ಥೆಗಳಿಗೆ ಈ ಬಗ್ಗೆ ರೋಗಿಗಳಿಗೆ ಹೆಚ್ಚಾಗಿ ಗೊತ್ತಿರುತ್ತದೆ. ಈ ಮಾಹಿತಿಯನ್ನು ಸೂಕ್ತ ನಿಯಮಗಳ ಮೂಲಕ ತಿಳಿಸಲು ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದು ಅಗತ್ಯ ಎಂದು ಆರೋಗ್ಯ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.