ಹೊನ್ನಾವರ : ಕೇಂದ್ರ ಸರ್ಕಾರ 500, 1000,ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಒಂದು ವರ್ಷ ಕಳೆದರೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಇರುವುದನ್ನು ಬ್ಲಾಕ್ ಕಾಂಗ್ರೆಸ್ ಹೊನ್ನಾವರ ವತಿಯಿಂದ ಶರಾವತಿ ಸರ್ಕಲ್ ನಿಂದ ಮೆರವಣಿಗೆ ಮಾಡಿ ತೀವ್ರವಾಗಿ ಖಂಡಿಸಿ ಈ ದಿನವನ್ನು ಕರಾಳ ದಿನವನ್ನಾಗಿ ಪ್ರತಿಭಟನೆ ಮೂಲಕ ರಾಷ್ಟ್ರಪತಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ನೋಟು ಅಮಾನ್ಯದಿಂದ ಕಪ್ಪು ಹಣ ಹೊರಬಂತೆ? ಜನರಿಗೆ ಅನುಕೂಲವಾಯಿತೇ? ಮೋದಿ ನಿರ್ಧಾರ ತಪ್ಪೋ? ಸರಿಯೋ?…ಹೀಗೆ ನೋಟು ಅಮಾನ್ಯ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಸುತ್ತ ಬಿಸಿ ಬಿಸಿ ಚರ್ಚೆ ನಡೆಯಿತು. ನೋಟು ಅಮಾನ್ಯದಿಂದ ಕಪ್ಪು ಹಣ ವಾಪಸ್‌ ಬಂತೆ? ಎಲ್ಲಿ ಬಂತು. ಕಪ್ಪು ಹಣವೆಲ್ಲ ಬಿಳಿಯಾಯಿತು. ತೋರಿಕೆಗಾಗಿ ಒಂದಷ್ಟು ಕಪ್ಪುಹಣವನ್ನು ವಶಪಡಿಸಿಕೊಳ್ಳಲಾಗಿದೆ. ನೋಟು ಬದಲಾವಣೆ ಅಕ್ರಮದಲ್ಲಿ ಭಾಗಿಯಾಗಿದ್ದ 33 ಬ್ಯಾಂಕ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ, ಅಮಾನತು ಶಿಕ್ಷೆಯಲ್ಲ. ಅವರ ಅಮಾನತು ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಬಹುದು. ಇದು ಜನರ ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು.

RELATED ARTICLES  ಉಮೇಶ ಮುಂಡಳ್ಳಿಯವರಿಗೆ ಭಟ್ಕಳ ದಲ್ಲಿ ನಾಗರಿಕ ವೇದಿಕೆ ಸನ್ಮಾನ

ಈ ಸಂದರ್ಭದಲ್ಲಿ ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಜೈನಾಬಿ ಸಾಬ್, ಕಾಂಗ್ರೇಸ್ ಪ್ರಮುಖರಾದ ವಿನಾಯಕ ಶೇಟ್, ಪ.ಪಂ ಕೆಲ ಸದಸ್ಯರು ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.

RELATED ARTICLES  ಕುಮಟಾದಲ್ಲಿ ಮಹಾಸಂತ, ಚಿಂತಕ ಶ್ರೀ ಸೇವಾಲಾಲರ 283 ನೇ ಜಯಂತಿ ಆಚರಣೆ.

gg

ಅದೇ ರೀತಿ ಹೊನ್ನಾವರದ ಮಂಕಿಯಲ್ಲಿಯೂ ಮನವಿ ಸಲ್ಲಿಸಲಾಯಿತು. ಕಳೆದ ನವೆಂಬರ್ 8 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 500 ಹಾಗೂ 1000 ಮುಖ ಬೆಲೆಯ ನೋಟ್ ಗಳನ್ನು ಅಮಾನಿಕರಣ ಮಾಡಿ ದೇಶದ ಆರ್ಥಿಕ ಅಭಿವೃದ್ಧಿ ಯನ್ನ ಕುಂಠಿತ ಗೊಳಿಸಿದ್ದಾರೆ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದರು.