ಶಿರಸಿ: ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ನನಗೆ ಬಿದ್ದಿಲ್ಲ ಎಂದು ಕೇಂದ್ರ ಕೌಶಲಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಸ್ಪಷ್ಟಪಡಿಸಿದ್ದಾರೆ. ನಗರದ ಲೋಕೋಪಯೋಗಿ ಇಲಾಖೆ ನಿರೀಕ್ಷಣಾ ಗೃಹದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಪಟ್ಟಿಯಲ್ಲಿ ಅವರ ಹೆಸರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಈ ಹೇಳಿಕೆ ವಿಶೇಷ ಎನಿಸಿಕೊಂಡಿದೆ. ‘ಮುಖ್ಯಮಂತ್ರಿಯಾಗುವ ಯಾವುದೇ ಯೋಚನೆಯೂ ನನ್ನಲ್ಲಿ ಬಂದಿಲ್ಲ’ ಎಂದರು. ‘ಟಿಪ್ಪು ಸುಲ್ತಾನ್ ಕುರಿತ ನನ್ನ ಹೇಳಿಕೆ ವಿರೋಧಿಸಿ ಭದ್ರಾವತಿಯಲ್ಲಾದ ಪ್ರತಿಭಟನೆ ನನಗೆ ತಿಳಿದಿಲ್ಲ. ನನ್ನ ಮುಂದೆ ಈ ಪ್ರತಿಭಟನೆ ನಡೆದಿಲ್ಲ.
ಆದರೆ, ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುವ ಕುರಿತ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತದೆ ಎಂಬುದು ನನಗೆ ನಿರೀಕ್ಷಿತವಾಗಿತ್ತು. ಆದರೆ, ಇದಾವುದಕ್ಕೂ ತಲೆಕೆಡಿಕೊಳ್ಳಬೇಕಾಗಿಲ್ಲ’ ಎಂದರು.