ಯಲ್ಲಾಪುರ : ನೋಟು ಅಮಾನ್ಯಕಾರಣದಿಂದ ದೇಶ ಹಲವಾರು ದಶಕಗಳಷ್ಟು ಹಿಂದೆ ಹೋಗಿದೆ. ವಿವೇಚನಾರಹಿತ ನಿರ್ಣಯದಿಂದಾಗಿ ದೇಶದ ಜನ ಜೀವನ ಭಗ್ನ ಗೊಂಡಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರು ನೋಟು ಅಮಾನ್ಯಿಕರಣ ಒಂದು ವರ್ಷ ಸಂದ ಸಂದರ್ಭದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ಕರಾಳ ದಿನ ಆಚರಣೆ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರ ಕಚೇರಿ ಎದುರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ನೋಟು ಅಮಾನ್ಯಿಕರಣದ ಸಂದರ್ಭದಲ್ಲಿ ಸರತಿಯಲ್ಲಿ ನಿಂತು ಮೃತ ಪಟ್ಟವರ ಕುಟುಂಭಕ್ಕೆ ಸಾಂತ್ವನ ಹೇಳುವ ಕಾರ್ಯ ಬಿಜೆಪಿ ಹಾಗೂ ಕೇಂದ್ರ ಸರ್ಕಾರದಿಂದಾಗಿಲ್ಲ. ಇದೀಗ ಜಿಎಸಟಿ ಹೇರಿ ಊಟಕ್ಕಿಂತ ತೆರಿಗೆ ಹೊರೆಯೇ ಹೆಚ್ಚಾಗಿದೆ. ಬಟ್ಟೆಗಳನ್ನು ಬಡವರು ಕೊಳ್ಳದಂತಾಗಿದೆ. ಈ ದೇಶದ ಜನರನ್ನು ಬಿಜೆಪಿ ಸರ್ಕಾರ ಎಲ್ಲಿ ತೆಗೆದುಕೊಂಡು ಹೋಗುತ್ತಿದೆ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ಹೋದಾಗಲೆಲ್ಲ ನಮ್ಮ ದೇಶದಲ್ಲಿ ನಿಯಮಗಳನ್ನು ಬಡಲಾಯಿಸುತ್ತಿರುತ್ತಾರೆ ಎಂದು ಆರೋಪಿಸಿದರು.
ರಾಜ್ಯದ ಕಾಂಗ್ರೇಸ್ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಏನು ಭರವಸೆ ನೀಡಿದೆ ಅದೆಲ್ಲವನ್ನು ಬಹುತೇಕ ಈಡೇರಿಸಿದೆ. ರೈತರ ₹ 50 ಸಾವಿರ ಸಾಲ ಮನ್ನಾ ಮಾಡಿದೆ, ರಾಜ್ಯದ 17 ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಕೇಂದ್ರದಿಂದ ₹ 50 ಸಾವಿರ ಸಾಲ ಮನ್ನಾ ಮಾಡಿಸಲಿ ಎಂದು ಹೆಬ್ಬಾರ ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎನ್ ಗಾಂವ್ಕರ ಮಾತನಾಡಿ, ಅನವಶ್ಯಕವಾಗಿ ಬಡವರಿಗೆ ತೊಂದರೆ ಕೊಡುವ ನಿಟ್ಟನಲ್ಲಿ ಬಿಜೆಪಿ ಮಾಡಿರುವ ನೋಟ್ ನಿಷೇಧ ಮುಂದಿನ ಚುನಾವಣೆಯಲ್ಲಿ ಅವರಿಗೆ ಮುಳುವಾಗಲಿದೆ ಎಂದರು.

RELATED ARTICLES  ಪಿಕ್ ನಿಕ್ ಗೆ ಬಂದಿದ್ದ ನೌಕಾನೆಲೆ ಸಿಬ್ಬಂದಿ ಹಳ್ಳದಲ್ಲಿ ಬಿದ್ದು ಸಾವು

ತಾ.ಪಂ ಮಾಜಿ ಅಧ್ಯಕ್ಷ ದೇವಿದಾಸ ಶಾನಭಾಗ .ಮಾತನಾಡಿ ಕೇಂದ್ರ ಸರ್ಕಾರ ಬದವರಿಂದ ಪಡೆದ ಹಣವನ್ನು ರೈತರಿಗೆ ಅಗತ್ಯವಿದ್ದವರಿಗೆ ನೀಡದೇ ದೊಡ್ಡ ದೊಡ್ಡ ಉದ್ಯಾಮದವರಿಗೆ ನೀಡಿದೆ, ಮದುವೆ ಮುಂತಾದ ವೈಯಕ್ತಿಕ ಸಮಾರಂಭಗಳಿಗಾಗಿ ನಾವು ಬ್ಯಾಂಕ ನಲ್ಲಿ ಇಅಟ್ಟ ಹಣಕ್ಕೆ ಭಿಕ್ಷೆ ಬೇಡುವಂತಎ ಮಾಡಿದೆ ಎಂದು ಅಪಾಧಿಸಿದರು.
ತಹಶೀಲ್ದಾರ ಡಿ.ಜಿ.ಹೆಗಡೆ ಮನವಿ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ‌ ಮೂಲಕ ರವಾನಿಸುವ ಭರವಸೆ ನೀಡಿದರು.

RELATED ARTICLES  ಅವಲೋಕನ ಪುಸ್ತಕಕ್ಕೆ ರಾಘವೇಶ್ವರ ಶ್ರೀಗಳಿಂದ ದಿವ್ಯಾಶೀರ್ವಾದ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎನ್ ಗಾಂವ್ಕರ್, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ವಿಜಯ ಮಿರಾಶಿ, ಎಪಿಎಂಸಿ ಅಧ್ಯಕ್ಷ ಎಂ.ಜಿ.ಭಟ್ ಸಂಕಡಗುಂಡಿ, ತಾ.ಪಂ ಸದಸ್ಯೆ ಕವಿತಾ ತಿನೇಕರ್, ರಾಧಾ ಹೆಗಡೆ, ಪ.ಪಂ ಸದಸ್ಯರಾದ ಸುನಂದ ದಾಸ್, ವಿನಾಯಕ ಪೂಜಾರಿ, ತಾ.ಪಂ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಶಾನಭಾಗ, ಪ್ರೇಮಾನಂದ ನಾಯ್ಕ, ಕಾಂಗ್ರೆಸ್ ಪ್ರಮುಖರಾದ ಎಂ ಆರ್ ಹೆಗಡೆ ತಾರೆಹಳ್ಳಿ, ಶೋಭಾ ಹುಲಮನಿ, ಮುರುಳಿ ಹೆಗಡೆ, ನಾಗೇಶ ಕವಡಿಕೆರೆ, ಡಾ.ರವಿ ಭಟ್ ಬರಗದ್ದೆ, ನವೀನ ನಾಯ್ಕ, ಐ ಯು ಶೇಕ್, ಇಡಗುಂದಿ ಗ್ರಾ. ಪಂ ಸದಸ್ಯ ನಾಗರಾಜ ನಾಯ್ಕ, ಎಪಿಎಂಸಿ ನಿರ್ದೇಶಕ ಲಾರೆನ್ಸ್ ಸಿದ್ದಿ, ಟಿ.ಸಿ.ಗಾಂವ್ಕರ್, ಹದ್ದು ತಳ್ಳಿಕೇರಿ, ಅಬ್ಬು ಘನಿ ಮುಂತಾದವರಿದ್ದರು.