ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೆನರಾ ವೆಲ್ ಫೇರ್ ಟ್ರಸ್ಟನ ಮರ್ಡೇಶ್ವರದ ಜನತಾ ವಿದ್ಯಾಲಯದ ಸಹಯೋಗದಲ್ಲಿ ತಾಲೂಕಾ ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ : ಕೆನರಾ ವೆಲ್ ಫೇರ್ ಟ್ರಸ್ಟ ನ ಮುರುಡೇಶ್ವರದ ಜನತಾವಿದ್ಯಾಲಯವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ದಿನಾಂಕ ೯.೧೧.೨೦೧೭ ರ ಗುರುವಾರ ಮುಂಜಾನೆ ೯.೩೦ ಕ್ಕೆ ಜನತಾ ವಿದ್ಯಾಲಯ ಮುರ್ಡೇಶ್ವರದಲ್ಲಿ ಆಯೋಜಿಸಲಾಗಿದೆ. ದಿನಕರ ದೇಸಾಯಿಯವರ ಬದುಕು ಬರಹ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಮತ್ತು ದಿನಕರ ದೇಸಾಯಿಯವರ ಚುಟುಕುಗಳಲ್ಲಿ ಸಾಮಾಜಿಕ ಕಳಕಳಿ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯು ನಡೆಯಲಿದೆ. ಹಾಗೆಯೇ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ ೩ ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಭಟ್ಕಳ ತಾಲೂಕಾ ಕ.ಸಾ.ಪ.ಅಧ್ಯಕ್ಷ
ಗಂಗಾಧರ ನಾಯ್ಕ ತಿಳಿಸಿದ್ದಾರೆ.

RELATED ARTICLES  ತಂಡ್ರಕುಳಿ ಬಳಿ ಅಪಾಯಕಾರಿ ತಿರುವು: ಸಾಲು ಸಾಲು ಅಪಘಾತ