ಹೊನ್ನಾವರ : 2017-18 ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕಡತೋಕದ ಜನತಾ ವಿದ್ಯಾಲಯ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಸುವರ್ಣಾ ಕೆ. ಗೌಡ–ತ್ರಿವಿಧ ಜಿಗಿತ, ಬೇಬಿ ಜಿ. ಗೌಡ-ಅಡೆ ತಡೆ ಓಟ, ನಾಗಶ್ರೀ ವಿ. ಗೌಡ-ಅಡೆತಡೆ ಓಟ, ಮಂಜುನಾಥ ಎಸ್. ಗೌಡ- 4*400 ರಿಲೇ, ಶ್ರೀಕಾಂತ ಎಂ. ಗೌಡ-4*400 ರಿಲೇ, ಅನಿಲ ಆಯ್. ಅಡಿಗುಂಡಿ– 4*400 ರಿಲೇ, ಮಣಿಕಂಠ ಎನ್. ಪಟಗಾರ- 4*400 ರಿಲೇ ಮತ್ತು ಅಡೆ ತಡೆ ಓಟದಲ್ಲಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪ್ರೇಮಿಯಾಗಿರುವ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ನೈತಿಕ ಬೆಂಬಲ ಸೂಚಿಸುವುದರೊಂದಿಗೆ ಅವರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾಪಟುಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಸಮವಸ್ತ್ರಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

RELATED ARTICLES  ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ : ನಾಗರಾಜ ನಾಯಕ

ಇವರ ಈ ಸಾಮಾಜಿಕ ಕಳಕಳಿಯನ್ನು ಶಾಲಾ ಉಪನ್ಯಾಸಕರು ಹಾಗೂ ಊರ ನಾಗರಿಕರು ಶ್ಲಾಘಿಸಿ ನಾಗರಾಜ ನಾಯಕ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

RELATED ARTICLES  ಕುಮಟಾದಲ್ಲಿ ಗೀತಾಜಯಂತಿ ಆಚರಣೆ.