ಸ್ಯಾನ್ ಫ್ರಾನ್ಸಿಸ್ಕೋ: ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಅತ್ಯಂತ ಜನಪ್ರಿಯವಾಘಿರುವ ವಾಟ್ಸ್ ಅಪ್ ಅಪ್ಲಿಕೇಷನ್ ನ ಹೊಸ ಬೀಟಾ ಆವೃತ್ತಿಯು ಹಲವಾರು ಹೊಸತನಗಳನ್ನು ಹೊಂದಿದೆ, ಆಪ್ ನ ಗಾತ್ರ ಚಿಕ್ಕದಾಗಿರುವುದು ಸೇರಿದಂತೆ ನಿಮ್ಮ ವಾಟ್ಸ್ ಅಪ್ ಸಂಖ್ಯೆಯನ್ನು ಬದಲಾಯಿಸಿದಾಗ ನಿಮ್ಮ ಸಂಖ್ಯೆಗೆ ಸಂಬಂಧಿಸಿದ ಸಂಪರ್ಕಗಳನ್ನು ತಿಳಿಸುವ ವೈಶಿಷ್ಟ್ಯಗಳನ್ನು ಈ ನೂತನ ಆವೃತ್ತಿ ಒಳಗೊಂಡಿರುತ್ತದೆ ಎಂದು ಮಾದ್ಯಮ ವರದಿ ತಿಳಿಸಿದೆ.
ತಂತ್ರಜ್ಞಾನ ವೆಬ್ ಸೈಟ್ ಟೆಕ್ನೆಪೋಲಿಸ್ ಪ್ರಕಾರ, ಇತ್ತೀಚಿನ ವಾಟ್ಸ್ ಅಪ್ ಆವೃತ್ತಿ 2.17.375 ನ್ನು ಡೌನ್ ಲೋಡ್ ಮತ್ತು ಇನ್ ಸ್ಟಾಲ್ ಮಾಡುವಾಗ ಇದಕ್ಕೆ ಮೊದಲಿನ ಮಾದರಿಗಿಂತ ಕಡಿಮೆ ಸ್ಪೇಸ್ ಸಾಕಾಗಲಿದೆ. ಈ ಮೊದಲಿನ ವಾಟ್ಸ್ ಅಪ್ ಅಪ್ಲಿಕೇಷನ್ ಗೆ ಹೋಲಿಸಿದರೆ ಸುಮಾರು 6 ಎಂಬಿ ನಷ್ಟು ಕಡಿಮೆ ಗಾತ್ರವನ್ನು ಈ ಬೀಟಾ ಆವೃತ್ತಿ ಹೊಂದಿದೆ. – ಈ ಹಿಂದಿನ ಆವೃತ್ತಿಯಲ್ಲಿದ್ದ 20 ಲೈಬ್ರರಿಗಳನ್ನು ತೆಗೆದು ಹಾಕಿದ ಪರಿಣಾಮ ವಾಟ್ಸ್ ಅಪ್ ನೂತನ ಆವೃತ್ತಿಯ ಗಾತ್ರ ತಗ್ಗಿದೆ ಎನ್ನಲಾಗಿದೆ.
ಇತರ ಪ್ರಮುಖ ಬದಲಾವಣೆ ಎಂದರೆ ನೀವು ನಿಮ್ಮ ವಾಟ್ಸ್ ಅಪ್ ಫೋನ್ ಸಂಖ್ಯೆಯನ್ನು ಬದಲಾಯಿಸಿದಾಗ, ನಿಮ್ಮ ಸಂಪರ್ಕಗಳು ಈ ಬದಲಾವಣೆಯ ನ್ನು ಸ್ವೀಕರಿಸುತ್ತವೆ.
ವಾಟ್ಸ್ ಅಪ್ ಬಳಕೆದಾರರು ತಮ್ಮ ಲಿಸ್ಟ್ ನಲ್ಲಿರುವ ಯಾವುದೇ ಸಂಪರ್ಕಗಳನ್ನು ಕಸ್ಟಮೈಸ್ ಮಾಡಬಹುದು – ನಿಮ್ಮೊಂದಿಗೆ ಚಾಟ್ ಮಾಡುವವರು ಸಹ ನೀವು ವಾಟ್ಸ್ ಅಪ್ ಸಂಖ್ಯೆಯನ್ನು ಬದಲಿಸಿದ್ದೀರಿ ಎನ್ನುವ ಸೂಚನೆ ಪಡೆಯುತ್ತಾರೆ.
ಈ ಎರಡು ಪ್ರಮುಖ ಬದಲಾವಣೆಯೊಂದಿಗೇ, ಸಂಸ್ಥೆ ಹಲವಾರು ಸಣ್ಣ ತಪ್ಪುಗಳನ್ನು ಸರಿಪಡಿಸುವ 473 ಫೈಲ್ ಗಳನ್ನು ಮಾರ್ಪಡಿಸಿದೆ.