ಹೊನ್ನಾವರ : ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದಬೈಲ್ ನಲ್ಲಿ ಒಂದು ಮರ ಬಲಿಗಾಗಿ ಕಾದಿದೆ .ಹೌದು ಯಾಕೆ ಹೀಗಂತಾರೆ? ಅಂದುಕೊಂಡ್ರಾ ಇಲ್ಲಿದೆ ನೋಡಿ ಈ ಮರದ ಕಥೆ ಹಾಗೂ ಅದರ ಪಕ್ಕದಲ್ಲಿರುವ ಮನೆಯವರ ವ್ಯಥೆ .

ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದಬೈಲು ಸುಮಾರು ಮುನ್ನೂರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪ್ರದೇಶ .ಹಳದೀಪುರದಿಂದ ನವಿಲಗೋಣು ಹಾಗೂ ಅದೇ ಮಾರ್ಗದಲ್ಲಿ ಮುಂದುವರಿದರೆ ಚಂದಾವರ ಸಿದ್ದಾಪುರ ರಸ್ತೆಗೆ ಇಲ್ಲಿ ರಸ್ತೆ ಸಂಪರ್ಕವಿದೆ . ಆದರೆ ಈ ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರ್ ಕ್ರಮಿಸಿದ ನಂತರ ನಮಗೆ ರಸ್ತೆಯ ಪಕ್ಕದಲ್ಲಿಯೇ ಒಂದು ಹಳೆಯ ಕಾಲದ ಮರ ಕಾಣಸಿಗುತ್ತದೆ .

ಇದು ಅನೇಕ ವರ್ಷಗಳಿಂದ ಇಲ್ಲಿಯೇ ಇರುವ ಮರ ಆದ್ರೆ ಈ ಮರಕ್ಕೆ ಮುಪ್ಪು ಆವರಿಸಿದೆ. ಮರ ಬೋಳಾಗಿದ್ದು ಇನ್ನೇನು ಬೀಳುವ ಸ್ಥಿತಿ ತಲುಪಿದೆ. ಅಷ್ಟೇ ಅಲ್ಲ ಮರ ಆಗಲೋ ಈಗಲೋ ಬಿದ್ದೇ ಬೀಳುತ್ತೇನೋ ಎನ್ನುವ ಸ್ಥಿತಿಯಲ್ಲಿದೆ . ಮರದ ಒಂದು ಬದಿಯಲ್ಲಿ ರಸ್ತೆ ಆದ್ರೆ ಇನ್ನೊಂದು ಕಡೆ ಮನೆ ಇದೆ . ಈ ಮರ ಮನೆಯ ಕಡೆ ವಾಲುತ್ತಿದೆ .ಈ ಬಗ್ಗೆ ಮನೆಯ ಯಜಮಾನರು ಅದೆಷ್ಟೋ ಬಾರಿ ಗ್ರಾಮ ಪಂಚಾಯತ ಮೆಟ್ಟಿಲು ತುಳಿದಿದ್ದಾರೆ . ಅದೆಷ್ಟು ಬಾರಿ ಮನವಿಯನ್ನು ಕೂಡ ಸಲ್ಲಿಸಿದ್ದಾರೆ ಆದರೆ ಗ್ರಾಮ ಪಂಚಾಯತ್ನ ಅಧಿಕಾರಿಗಳು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ . ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಕೂಡ ಸಂಪರ್ಕ ಮಾಡಲಾಗಿದೆಯಂತೆ . ಆದರೆ ಅವರ್ಯಾರು ಈ ಮನೆಯವರ ಮನವಿಗೆ ಸ್ಪಂದಿಸುತ್ತಲೇ ಇಲ್ಲ ಎನ್ನುತ್ತಾರೆ ಮನೆಯವರು . ಅದಷ್ಟೇ ಅಲ್ಲ ಎಲ್ಲವನ್ನೂ ಕಂಡೂ ಕಾಣದಂತಿದ್ದಾರೆ ಗ್ರಾ.ಪಂ ಪದಾಧಿಕಾರಿಗಳು ಮತ್ತು ಅಧಿಕಾರಿಗಳು.

RELATED ARTICLES  ಶ್ರೀ ಬಬ್ರುಲಿಂಗೇಶ್ವರ ದೇವಾಲಯದಲ್ಲಿ ಹೊಸ ಅಕ್ಕಿ ಉಪಾರ ಪೂಜೆ

IMG 20171110 WA0003

ಹೌದು ಈ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಪದಾಧಿಕಾರಿಗಳಿಗೆ ಇದರ ಬಗ್ಗೆ ಸ್ವಲ್ಪವೂ ಗಮನವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇಲ್ಲಿ ಉದ್ಭವವಾಗಿದೆ .ಮನೆಯ ಮೇಲೆ ಈಗಲೂ ಬೀಳುವ ಸ್ಥಿತಿಯಲ್ಲಿರುವ ಮರವನ್ನು ನೋಡಿಕೊಂಡು ಈ ಮನೆಯವರು ದಿನ ಕಳೆಯುತ್ತಿದ್ದಾರೆ . ಜೀವವನ್ನು ಕೈಯಲ್ಲಿ ಹಿಡಿದು ಮರವನ್ನೇ ನೋಡುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಇವರದ್ದು .

RELATED ARTICLES  ಉಸಿರಾಟದ ಸಮಸ್ಯೆಯಿಂದ ಸಾವಿಗೀಡಾದ ಒಂದನೇ ತರಗತಿಯ ವಿದ್ಯಾರ್ಥಿ

ಎಷ್ಟು ಕೇಳಿಕೊಂಡರೂ ಗ್ರಾಮ ಪಂಚಾಯತ ಅವರು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಲೇ ಇಲ್ಲ ಎನ್ನೋದು ಇಲ್ಲಿನ ಗ್ರಾಮಸ್ಥರ ಅಳಲು . ಹೀಗಾಗಿಯೇ ಈ ಊರಿನ ಯುವಕರೆಲ್ಲ ಸೇರಿ ಈಗ ವಾಟ್ಸಪ್ ಮೂಲಕ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ .ಮನವಿ ಸ್ವೀಕರಿಸಿದ ಡಿಸಿ ಅವರು ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ . ಹೀಗಾಗಿ ಈ ಬಗ್ಗೆ ಕ್ರಮದ ಭರವಸೆ ಜನರಲ್ಲಿ ಮೂಡಿದೆ ಆದರೆ ಇಲ್ಲಿಯ ಗ್ರಾಮ ಪಂಚಾಯತ್ನ ಪದಾಧಿಕಾರಿಗಳಿಗೆ ಹಾಗೂ ಅಧಿಕಾರಿಗಳಿಗೆ ಜನತೆಯ ಕಷ್ಟ ಅರ್ಥನೇ ಆಗುತ್ತಿಲ್ಲವೇ ಎನ್ನೋದು ಈಗ ನಮ್ಮ ಮುಂದಿರುವ ಪ್ರಶ್ನೆ ?

ಆದಷ್ಟು ಬೇಗ ಮರದಿಂದ ಉಂಟಾದ ಭಯ ಮನೆಯಿಂದ ದೂರಾಗಲಿ. ಜನತೆಯ ಮನವಿಗೆ ಸ್ಪಂದಿಸುವ ಮನಸ್ಸು ಈ ಗ್ರಾಮ ಪಂಚಾಯತಿ ಅಧಿಕಾರಿಗಳಿಗಳಿಗೆ ಬರಲಿ ಎಂಬುದು ನಮ್ಮ ಆಶಯ.