ಕುಮಟಾ : ಇಲ್ಲಿಯ ಡಾ.ಹಳಕಾರ ಚೆರಿಟೇಬಲ್ ಮತ್ತು ಇನ್ ಫಾರ್ಮೇಶನ್ ಅಸೋಸಿಯೇಯಶನ್ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘದ ವತಿಯಿಂದ ಶ್ರೀ ರಾಘವೇಶ್ವರ ಸ್ವಾಮೀಜಿ ಅವರ ಆಶೀರ್ವಾದೊಂದಿಗೆ ಆರೋಗ್ಯ ತಪಾಸಣೆ, ಔಷಧವಿತರಣೆ, ಮಾಹಿತಿ ಉಚಿತ ಶಿಬಿರವು ಯಲವಳ್ಳಿ ಮರಾಠಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ವಿನಾಯಕ ಹೆಬ್ಬಾರ ಶಿಬಿರ ಉದ್ಘಾಟಿಸಿದರು. ಡಾ.ಅಶೋಕ ಭಟ್ಟ ಹಳಕಾರ ಪೂರ್ವಭಾವಿ ಆರೋಗ್ಯ ಕಾಳಜಿ ಕುರಿತು ಉಪನ್ಯಾಸ ನೀಡಿ, 40 ವರ್ಷಕ್ಕಿಂತ ಹೆಚ್ಚಿನವರು ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಇತ್ಯಾದಿಗಳ ಕುರಿತು ಪೂರ್ವಭಾವಿ ಆರೋಗ್ಯ ತಪಾಸಣೆಗೆ ಒಳಪಡಿಸಿಕೊಳ್ಳುವ ಅಗತ್ಯತೆಯಿದೆ. ಮಕ್ಕಳು ಕಣ್ಣು,ಹಲ್ಲುಗಳ ತಪಾಸಣೆ ನಡೆಸಿಕೊಳ್ಳುವ ಮೂಲಕ ಜಾಗೃತಿ ವಹಿಸಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಹೆಗಡೆ, ಭಾರತೀಯ ಕುಟುಂಬ ಯೋಜನಾ ಸಂಘದ ಅಧಿಕಾರಿ ಮಂಜುಳಾ ಗೌಡ ಮತ್ತು ಭಾರತಿ ನಾಯಕ ಮತ್ತಿತರರು ಇದ್ದರು.