ಉತ್ತರ ಕನ್ನಡ : ಟಿಪ್ಪು ಜಯಂತಿ ಉತ್ತರಕನ್ನಡದ ಹಲವೆಡೆ ಆಚರಣೆಗೊಂಡಿದೆ. ವಿವಿಧ ತಾಲೂಕಿನಲ್ಲಿ ಆದ ಆಚರಣೆಯ ವರದಿ ಇಲ್ಲಿದೆ.

FB IMG 1510310483493

ಹೊನ್ನಾವರ: ಪಟ್ಟಣ ಪಂಚಾಯತಿ ಸಭಾಭನದಲ್ಲಿ ತಾಲೂಕು ಆಡಳಿತದ ವತಿಯಿಂದ ಟಿಪ್ಪು ಜಯಂತಿ ಆಚರಣೆ ನಡೆಯಿತು.
ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ್ ಕಾರ್ಯಕ್ರಮ ಉದ್ಘಾಟಿಸಿದರು.
ಉಪನ್ಯಾಸಕರಾಗಿ ಸಾಹಿತಿ ಡಾ. ಎಸ್.ಡಿ.ಹೆಗಡೆ ಮಾತನಾಡಿದರು. ತಹಸೀಲ್ದಾರ ವಿ.ಆರ್.ಗೌಡ, ಬಿಇಒ ಗಿರೀಶ ಪದಕಿ, ಇಸ್ಮಾಯಿಲ್ ತಲಕಣಿ, ಹುಸೇನ್ ಖಾದ್ರಿ, ಸುರೇಶ ಮೇಸ್ತ, ಜಗದೀಪ ತೆಂಗೇರಿ, ಮಂಜುನಾಥ ಖಾರ್ವಿ ಇತರರು ಪಾಲ್ಗೊಂಡಿದ್ದರು.

FB IMG 1510310753160

ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತ್ಯುತ್ಸವವು ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ನಡೆಯಿತು.

RELATED ARTICLES  ಬ್ರಿಟನ್ನಿನಿಂದ ವಾಪಸ್ಸಾದ ಉತ್ತರಕನ್ನಡದ 14 ಜನ : ಅವರಿಗೆ ರೂಪಾಂತರ ಕೊರೋನಾ ಟೆಸ್ಟ್

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕಾರ್ಯಕ್ರಮ ಉದ್ಘಾಟಿಸಿ, ಟಿಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಟಿಪ್ಪು ಆಂಗ್ಲೊ ಮೈಸೂರು ಯುದ್ಧದಲ್ಲಿ ಹೋರಾಡಿದ್ದ ಎಂದರು.
ಟಿಪ್ಪು ಸುಲ್ತಾನನ ಕುರಿತು ಸಿದ್ದಾಪುರದ ವಿಠ್ಠಲ ಭಂಡಾರಿ ವಿಶೇಷ ಉಪನ್ಯಾಸ ನೀಡಿದರು.

ವಾರ್ತಾ ಇಲಾಖೆಯ ವತಿಯಿಂದ ಹೊರತಂದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಪುಸ್ತಕವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಬಿಡುಗಡೆಗೊಳಿಸಿದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಕೆಎಫ್ ಡಿಸಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಕೆಡಿಎ ಅಧ್ಯಕ್ಷ ಸಂದೀಪ ತಳೇಕರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ನಾಯಕ ಉಪಸ್ಥಿತರಿದ್ದರು.

RELATED ARTICLES  ಅವಧಿ ಮುಗಿದ ತಾಲ್ಲೂಕು ಪಂಚಾಯ್ತಿ ಕ್ಯಾಂಟೀನ್‌ ತೆರವು

FB IMG 1510311488153

ಕುಮಟಾ: ತಾಲೂಕಾ ಆಡಳಿತ , ತಾಲೂಕು ಪಂಚಾಯತ್, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿ’ ಕಾರ್ಯಕ್ರಮವನ್ನು ಶಾಸಕಿ ಶಾರದಾ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಮಧುಸೂಧನ ಶೇಟ್, ಜಿ.ಪಂ ಸದಸ್ಯ ರತ್ನಾಕರ ನಾಯ್ಕ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.