ಕುಮಟಾ: ಇದೇ ಬರುವ ಹದಿನಾಲ್ಕು ರಂದು ಕುಮಟಾಕ್ಕೆ ಆಗಮಿಸಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವ ಸಿದ್ಧತೆ ಭರದಿಂದ ಸಾಗಿದೆ . ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಪರಿವರ್ತನಾ ಯಾತ್ರೆಯ ಪೂರ್ವ ಸಿದ್ಧತೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ . ಅದರಲ್ಲಿಯೂ ಬೆಳಕು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರಾದ ನಾಗರಾಜ ನಾಯಕ ತೊರ್ಕೆ ಪರಿವರ್ತನ ಯಾತ್ರೆಯ ಪೂರ್ವ ಸಿದ್ಧತೆಯನ್ನು ಬೂತ್ ಮಟ್ಟದಲ್ಲಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.

RELATED ARTICLES  ಗ್ರಂಥಾಲಯದಲ್ಲಿ ಬೆಂಕಿ ಅವಾಂತರ

ಪ್ರತಿದಿನ ವಿವಿಧ ಬೂತ್ಗಳಿಗೆ ತೆರಳಿ ಅಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ . ಅವರ ಕಾರ್ಯವೈಖರಿಯ ಕೆಲವು ವಿವರಗಳು ಇಲ್ಲಿವೆ .

FB IMG 1510387635090

ಮಿರ್ಜಾನ ಶಕ್ತಿ ಕೇಂದ್ರ ಕುಡುಗುಂಡಿ, ನಾಗೂರುಗಳಲ್ಲಿ ನಡೆದ ಬೂತ್ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಇವರು ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಯಶಸ್ವಿಯಾದರೂ ಅದೇ ರೀತಿ ಪರಿವರ್ತನ ಯಾತ್ರೆ ಕುರಿತಾಗಿ ಜನತೆಗೆ ವಿವರಣೆ ನೀಡಿದರು .

FB IMG 1510387606255

ಮಿರ್ಜಾನ ಶಕ್ತಿಕೇಂದ್ರದ ಬೆಟ್ಕುಳಿಯಲ್ಲಿ ಬೂತ್ ಮಟ್ಟದ ಸಭೆ ನಡೆಸಿ, ದಿನಾಂಕ 14-11-17 ರಂದು ಕುಮಟಾದ ಮಣಕಿ ಗ್ರೌಂಡಿನಲ್ಲಿ ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ನವರ ನೇತ್ರತ್ವದಲ್ಲಿ ನಡೆಯಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಬಗೆಗೆ ಚರ್ಚೆ ನಡೆಸಿದರು.

RELATED ARTICLES  ಟ್ಯಾಟೂ ಹಾಕಿಸಿಕೊಂಡು ಟ್ರೆಂಡ್ ಮಾಡಲು ಹೋದವಳು ಆಸ್ಪತ್ರೆ ಸೇರಬೇಕಾಯ್ತು…!

ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಕಡೆಗಳಲ್ಲಿ ಪ್ರತಿದಿನ ಸಭೆ ಹಾಗೂ ಕಾರ್ಯಕರ್ತರ ಜೊತೆಗೆ ಚರ್ಚೆಯಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.