ಗೋಕರ್ಣ:-ಸಮದ್ರದಲ್ಲಿ ಮುಳುಗುತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.

ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಗೋಕರ್ಣ ಕ್ಕೆ ಆಗಮಿಸಿದ್ರು , ಈ ಸಂದರ್ಭದಲ್ಲಿ ಮುಖ್ಯ ಕಡಲ ತೀರದಲ್ಲಿ ನೀರಿಗೆ ಇಳಿದಾಗ ಅಲೆಗೆ ಎರಡು ಜನ ಕೊಚ್ಚಿ ಹೋಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿಗಳಾದ ಮೋಹನ್ ಅಂಬಿ, ರಾಜು ಅಂಬಿ,ಚಂದ್ರಕಾಂತ್ ಹಾಗೂ ಪುರುಷೋತ್ತಮ್ ಹರಿಕಾಂತ್ ಎಂಬುವವರು ಉತ್ತರ ಪ್ರದೇಶ ಮೂಲದ ರಮೇಶ್ ಯಾದವ್ ಮದ್ಯಪ್ರದೇಶ ಮೂಲದ ಕಮಲೇಶ್ ಕುಮಾರ್ ರನ್ನು ರಕ್ಷಿಸಿದ್ದಾರೆ . ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

RELATED ARTICLES  ಸೂರಜ್ ನಾಯ್ಕ ಸೋನಿ ವಿರುದ್ಧ ಹೇಳಿಕೆಗೆ ಸೂರಜ್ ನಾಯ್ಕ ಅಭಿಮಾನಿ ಬಳಗದ ಖಂಡನೆ .

ಈ ಸಂಬಂಧ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೋಜು ಮಸ್ತಿಯ ಹೆಸರಿನಲ್ಲಿ ಜನತೆ ಅಪಾಯದ ಸುಳಿಗೆ ಸಿಕ್ಕಿ ಬೀಳುವುದು ಇದೇ ಹೊಸತಲ್ಲವಾದರೂ ಮತ್ತೆ ಮತ್ತೆ ಘಟನೆ ಮರುಕಳಿಸುತ್ತಿರುವುದು ಬೇಸರದ ಸಂಗತಿ. ಇನ್ನಾದರೂ ಜನತೆ ಮೋಜು ಮಾಡುವ ನೆಪದಲ್ಲಿ ಜೀವಕ್ಕೆ ಆಪತ್ತು ತಂದುಕೊಳ್ಳದೆ ಇರಲೆಂಬುದೇ ನಮ್ಮ ಆಶಯ.

RELATED ARTICLES  ಪದವಿ, ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಗ್ನೀನ್ ಸಿಗ್ನಲ್ !