ಇವರಿಗೆ ” ಕರಿಮಣಿ” ಸರವೆ ಆಭರಣ
ಇವರ ನಗುವೇ ಕೋಟಿ ಸಂಪತ್ತಿಗೆ ಸಮ ಇವರೇ ನಮ್ಮ ಸುಧಾ ಮೂರ್ತಿ” ಅಮ್ಮನವರು

ಕೋಟಿಗಟ್ಟಲೆ ಆಸ್ತಿ, VVIP ಸ್ಟೇಟಸ್, ಇಂಟರ್ ನ್ಯಾಷನಲ್ ಬ್ರಾಂಡ್ ಕಂಪನಿ, ಪ್ರಪಂಚದಾದ್ಯಂತ ಬ್ರಾಂಚ್ ಗಳು.

ಎಲ್ಲಾ ಇದ್ರೂ ಕೂಡ ಇವರ ಬದುಕು ಎಷ್ಟು ಸರಳ ಅಂದರೆ, ಮುಡಿಗೆ ಮೊಳ ಮಲ್ಲಿಗೆಯ ಹೊರತು ಮತ್ಯಾವುದೇ ಆಭರಣವಿಲ್ಲ….

ದೇವರು ಕೊಟ್ಟ ನಗುವೇ ಇವರಿಗೆ ಬೆಲೆ ಕಟ್ಟಲಾಗದ ಆಭರಣ….!!

ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಎಂಬ ಗಾಧೆ ಮಾತಿನಂತೆ ಬಾಳುವ ಕೆಲ ಹೆಣ್ಮಕ್ಕಳು ನೋಡಿ ಕಲೀಬೇಕು ನಿಜವಾದ ಸಂತೋಷ ಅಂದರೆ ಏನು ಅಂತ.

ದುಡ್ಡು ಎಷ್ಟೇ ಇದ್ದರೂ ಒಂದೂ ಆಭರಣವನ್ನೂ ಧರಿಸಲ್ಲ, ಕುತ್ತಿಗೆಯಲ್ಲಿ ಇಂದಿಗೂ ಇರುವುದು “ಕರೀಮಣಿ” ಸರದ ಮಾಂಗಲ್ಯ. ಇಂತಹ ಸಂಸ್ಕೃತಿ ಈಗಿನ ಹೆಣ್ಣು ಮಕ್ಕಳಲ್ಲಿ ಕಾಣುವುದು ಬೆರಳೆಣಿಕೆಯಷ್ಟು ಮಾತ್ರವೇ….!

ನನಗೆ ಸುಧಾ ಮೂರ್ತಿಯವರನ್ನ ನೋಡಿದಾಗೆಲ್ಲ ಅವರ ಬಗ್ಗೆ ಓದಿದ ಒಂದು ಘಟನೆ ನೆನಪಾಗುತ್ತೆ…

ಸುಧಾ ಕುಲಕರ್ಣಿ ಕಾಲೇಜಿನಲ್ಲಿ ಓದುವಾಗ
ಟಾಟ ಕಂಪನಿಯಿಂದ ಅವರ ಕಾಲೇಜಿಗೆ ಒಂದು ನೋಟೀಸ್ ಬರುತ್ತೆ, ಅದರಲ್ಲಿ “ಟಾಟ ಕಂಪನಿಯಲ್ಲಿ ಕೆಲಸ ಮಾಡಲು ಯುವಕರು ಬೇಕಾಗಿದ್ದಾರೆ” ಅಂತ ಬರೆದಿರುತ್ತಾರೆ.

RELATED ARTICLES  ಕುಮಟಾ : ಅಪರಿಚಿತ ವಾಹನ ಬಡಿದು ಚಿರತೆ ಸಾವು.

ಇದನ್ನು ಗಮನಿಸಿದ ಸುಧಾ ಕುಲಕರ್ಣಿಯವರು ಆಗಿನ TATA ಕಂಪನಿಯ ‘ರತನ್ ಟಾಟ’ ಅವರಿಗೆ ಒಂದು ಪತ್ರ ಬರೆಯುತ್ತಾರೆ ಅದರಲ್ಲಿ ಅವರು ಹೆಣ್ಣು ಮಕ್ಕಳ ಪರ ಧ್ವನಿ ಎತ್ತುತ್ತಾರೆ…

“ಕೇವಲ ಯುವಕರು ಮಾತ್ರ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಕಳುಹಿಸಿರುವ ನೋಟೀಸ್ ಅನ್ನು ನಾನು ಖಂಡಿಸುತ್ತೇನೆ ಅಂತ ಆ ಪತ್ರದಲ್ಲಿ ಬರೆದಿರುತ್ತಾರೆ”

ಇದನ್ನು ಓದಿದ ರತನ್ ಟಾಟ, ಸುಧಾ ಕುಲಕರ್ಣಿಯವರ ಆತ್ಮವಿಶ್ವಾಸ ಮೆಚ್ಚಿ ಖುದ್ದಾಗಿ ಬಂದು ಸುಧಾ ಕುಲಕರ್ಣಿಯವರನ್ನ ಸಂದರ್ಶಿಸಿ ಕೆಲಸಕ್ಕೆ ಆಹ್ವಾನಿಸುತ್ತಾರೆ.

ಹೆಣ್ಣೆಂದರೆ ಕೇವಲ ಮನೆಗೆ ಮಾತ್ರ ಎಂದು ಸೀಮಿತವಾಗಿದ್ದ ಆ ಕಾಲದಲ್ಲೆ ಸುಧಾ ಕುಲಕರ್ಣಿಯವರು ಹೆಣ್ಣಿಗೆ ಗಂಡಿನಷ್ಟೇ ಸಮಾನ ಹಕ್ಕಿದೆ ಅವಳು ಕೂಡ ಗಂಡಿನ ಹಾಗೆ ಹೊರಗೆ ಕಾರ್ಖಾನೆಗಳಲ್ಲಿ ದುಡಿಯ ಬಲ್ಲಳು ಎಂದು ತೋರಿಸಿ ಕೊಡುತ್ತಾರೆ….!!

ಟಾಟ ಕಂಪನಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಅವರು ಕೆಲಸ ಮಾಡಿದ್ದು ಕೇವಲ ಆರು-ಏಳು ತಿಂಗಳು ಮಾತ್ರ ನಂತರ “ನಾರಾಯಣ ಮೂರ್ತಿ” ಯವರೊಂದಿಗೆ ಮದುವೆ,
ಇವರು ಮದುವೆಗೆ ಖರ್ಚಾಗಿದ್ದು ಕೇವಲ ‘ನಾಲ್ಕು ನೂರು’ ರೂಪಾಯಿಗಳಂತೆ.

ಸುಧಾ ಕುಲಕರ್ಣಿ ಹಾಗೂ ನಾರಾಯಣ ಮೂರ್ತಿಯವರ ಮದುವೆ ಖರ್ಚು ಅವರೇ ಇಬ್ಬರೂ ತಲಾ 200ರೂಪಾಯಿ ಹಾಕಿ ಬರಿಸಿದರು ಅಂತ ಕೇಳಿದ್ದೇನೆ….!

RELATED ARTICLES  ಹೊಸತನಗಳೊಂದಿಗೆ ಬರಲಿದೆ ಬೀಟಾ ಆವೃತ್ತಿಯ ವಾಟ್ಸ್ ಅಪ್!

ಅಂದು ಕೇವಲ ನಾಲ್ಕು ನೂರು ರೂಪಾಯಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಮೂರ್ತಿ ದಂಪತಿಗಳು ಇಂದು ಲಕ್ಷಾಂತರ ಜೋಡಿಗೆ ಮದುವೆ ಮಾಡಿಸುತಿದ್ದಾರೆ, ಸುಮಾರು ಟ್ರಸ್ಟ್ ಗಳ ಮೂಲಕ ಲಕ್ಷಾಂತರ ಅನಾಥರು, ವೃದ್ದರಿಗೆ ದಾರಿ ದೀಪವಾಗಿದ್ದಾರೆ….!

ಕೇವಲ INFOSYSನ chairperson ಆಗಿ ಮಾತ್ರ ಅಲ್ಲ, ಒಬ್ಬ ಸಮಾಜದ ಕಾರ್ಯಕರ್ತೆಯಾಗಿ, ಒಬ್ಬ ಲೇಖಕಿಯಾಗಿಯೂ ಕೂಡ ತಮ್ಮ ಕೊಡುಗೆ ನೀಡಿದ್ದಾರೆ.

ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಮೂರ್ತಿ ದಂಪತಿಗಳನ್ನ ನೋಡಿ ಮಾಡಿರಬೇಕು ಎಂದು ಅನಿಸುತ್ತದೆ….!!

ಸುಧಾ ಮೂರ್ತಿಯವರು ಒಬ್ಬ ಹೆಣ್ಣು ಮಗಳು ಎಷ್ಟು ಸಿಂಪಲ್ ಆಗಿ ಇರಬೇಕು, ಎಷ್ಟು ಆತ್ಮೀಯವಾಗಿ ಇರಬೇಕು, ಸಮಾಜದಲ್ಲಿ ಆಕೆಯ ಪಾತ್ರ ಹೇಗಿರ ಬೇಕು ಇವೆಲ್ಲವುಗಳಿಗೆ ಒಂದು ಬೆಸ್ಟ್ ಎಕ್ಸಾಮ್ ಪಲ್….!!

ಕೋಟಿಗಟ್ಟಲೆ ಹಣವಿದ್ದರೂ, ಸಮಾಜದಲ್ಲಿ ಒಳ್ಳೆಯ ಹೆಸರಿದ್ದರೂ ಒಂಚೂರು ಆಡಂಭರವಿಲ್ಲದೆ, ಸಮಾಜದ ಏಳಿಗೆಗಾಗಿ ಸರಳವಾಗಿ ಬಾಳುತಿರುವ ಇವರು ಎಲ್ಲರಿಗೂ ಆದರ್ಶ.
ಇವರ ಬಗ್ಗೆ ಬರೆದಷ್ಟು ಕಡಿಮೆ ಎನಿಸುತ್ತದೆ, ಅಷ್ಟು ಮೇರು ವ್ಯಕ್ತಿತ್ವದ ಮಹಿಳೆ.

ಸುಧಾ ಮೂರ್ತಿಯವರು ಸದಾ ಹೀಗೆ ನಗು-ನಗುತಾ
ಬಾಳಲಿ, ಅವರ ಬಾಳು ಎಂದೆಂದೂ ಹಸಿರಾಗೆ ಇರಲಿ.