ಕುಮಟಾ : ಬಿಜೆಪಿ ಪರಿವರ್ತನ ಯಾತ್ರೆಗೆ ತಮ್ಮ ಕಾರನ್ನು ಸೂರಜ್ ನಾಯ್ಕ ಸೋನಿ ವಿಶೇಷವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ .ಹೌದು ಇದೇ ಬರುವ ಹದಿನಾಲ್ಕು ರಂದು ಕುಮಟಾದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ರಾಲಿಗೆ ಸೂರಜ್ ನಾಯ್ಕ ಸೋನಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದಾರೆ .

ತನ್ನಿಮಿತ್ತ ವಾಗಿ ಅವರು ತಮ್ಮ ಕಾರಿಗೆ ವಿಶೇಷ ಮಾರ್ಪಾಡು ಮಾಡಿಕೊಂಡಿದ್ದಾರೆ .ಪರಿವರ್ತನಾ ಯಾತ್ರೆಯ ಕುರಿತಾದ ವಿವರಗಳನ್ನು ಒಳಗೊಂಡ ಸ್ಟಿಕ್ಕರ್ಗಳನ್ನು ಕಾರಿನ ಎಲ್ಲ ಗಾಜುಗಳಿಗೆ ಅಂಟಿಸಲಾಗಿದ್ದು ಕಾರು ವೈವಿಧ್ಯಮಯವಾಗಿ ಕಂಗೊಳಿಸುತ್ತಿದೆ .

RELATED ARTICLES  ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹೊನ್ನಾವರದ ಬಾಲಕ

IMG 20171111 WA0018

ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾ ಹಾಗೂ ಯಡಿಯೂರಪ್ಪನವರ ಭಾವಚಿತ್ರ ಹೊಂದಿರುವ ಪರಿವರ್ತನಾ ಯಾತ್ರೆಯ ಸ್ಪೀಕರ್ ಗಳು ಇವರ ಕಾರಿನ ಮೇಲೆ ಕಂಗೊಳಿಸುತ್ತಿದೆ . ಇದು ಜನತೆಗೆ ಪ್ರಚಾರಕ್ಕೂ ಅನುಕೂಲವಾಗುವುದೆಂಬುದು ಅವರ ಅಭಿಮತ.

RELATED ARTICLES  ದೇವಾಲಯದಲ್ಲಿ ಅರಿಶಿನ ಕುಂಕುಮ ಕಾರ್ಯಕ್ರಮ

ಎಲ್ಲ ಕಡೆ ಪರಿವರ್ತನಾ ಯಾತ್ರೆಯ ಪ್ರಚಾರಕ್ಕೆ ಮತ್ತು ಬೂತ್ ಸಭೆಗಳಿಗೆ ಇದೇ ಕಾರನ್ನು ಅವರು ಒಯ್ಯುತ್ತಿದ್ದು ಅದು ಜನರಿಗೆ ವಿಶೇಷವಾಗಿ ಕಂಗೊಳಿಸುತ್ತಿದೆ . ಒಟ್ಟಿನಲ್ಲಿ ಪರಿವರ್ತನಾ ಯಾತ್ರೆಯ ಪ್ರಚಾರ ಭರದಿಂದ ಸಾಗಿದ್ದು ಸೂರಜ್ ನಾಯ್ಕ ಸೋನಿ ಅವರು ಕಾರಿನ ರೂಪನೇ ಬದಲಿಸಿಕೊಂಡು ಪರಿವರ್ತನಾ ಯಾತ್ರೆಯ ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ .