ಇಡೀ ದೇಶವೇ ಅಭಿವೃದ್ಧಿ ಯತ್ತ ದಾಪುಗಾಲಿಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕವನ್ನು ‌ಔನತ್ಯಕ್ಕೇರಿಸುವ ಸಮಯ ಬಂದಿದೆ. ಈಗ ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆ ಎಂದರೆ ಮತ್ತದೇ ಜಾತಿ ರಾಜಕಾರಣ, ಆಶ್ವಾಸನೆ ಗಳು, ಹಣದ ಹೊಳೆ ಹರಿಸೋದು. ಆದರೆ ಕರ್ನಾಟಕವನ್ನು ಯಾವೂದಕ್ಕೂ ಕಡಿಮೆ ಇಲ್ಲದಂತೆ ಮುಂದುವರಿಸಿಕೊಂಡು ಹೋಗುವ ನಾಯಕನಿಗೆ ಕರ್ನಾಟಕದ ಅಧಿಕಾರ ಒಪ್ಪಿಸಬೇಕು. ನಮ್ಮ ರಾಜ್ಯದ ಕುರಿತಂತೆ ನಾವೊಂದು ಕನಸು ಕಾಣಬೇಕು. ಪಕ್ಷ ಯಾವುದೇ ಬರಲಿ, ವ್ಯಕ್ತಿ ಯಾರೇ ಅಧಿಕಾರದಲ್ಲಿರಲಿ ರಾಜ್ಯದ ಜನತೆಯ ಕನಸನ್ನು ನನಸು ಮಾಡುವುದಷ್ಟೆ ಅವನ ಕರ್ತವ್ಯವಾಗಿರಬೇಕು. ಅಂತಹ ಪ್ರಜ್ಞಾವಂತಿಕೆ ನಾವೂ ಬೆಳೆಸಿಕೊಳ್ಳಬೇಕು, ನಾಯಕರಿಗೂ ತುಂಬಬೇಕು. ನಿಜಾರ್ಥದಲ್ಲಿ ಪ್ರಜಾಪ್ರಭುತ್ವ ಆಚರಿಸಬೇಕು. ಈ ಬಾರಿ ನಾವು ಬೆಂಬಲಿಸೋದು ವ್ಯಕ್ತಿಗಲ್ಲ ನಾಡಿನ ಅಭಿವೃದ್ಧಿಗೆ ಎಂಬುದನ್ನು ದೃಢಪಸಿಕೊಳ್ಳೋಣ. ಒಮ್ಮೆ ನಮ್ಮವರ ಕನಸುಗಳು ಬಲ್ಲವರ ಕೈಸೇರಿ ಅವರು ಸಾಧ್ಯಾಸಾಧ್ಯಾತೆಗಳ ಪರಿಶೀಲನೆ ನಡೆಸಿ ನೀಲಿನಕಾಶೆ ತಯಾರಿಸಿ ಕೊಡಲಿ‌. ಅದಕ್ಕೆ ತಕ್ಕಂತೆ ದುಡಿಯುವುದಷ್ಟೇ ಆಳುವ ಕೈಗಳ ಕೆಲಸ. ಅದಕ್ಕೆ ಈ ಬಾರಿ ಸದೃಢ ಕರ್ನಾಟಕಕ್ಕೊಂದು ಕನಸು ಕಾಣೋಣ ಅಂದಿದ್ದು.

RELATED ARTICLES  ಭ್ರಷ್ಟ್ರಾಚಾರ ನಿಗ್ರಹದಳದಿಂದ ಅಹವಾಲು ಸ್ವೀಕಾರ.

*#ನನ್ನಕನಸಿನಕರ್ನಾಟಕ*ವೆಂದರೆ ಯಾವುದೇ ರಾಜಕೀಯ ಪಕ್ಷವಲ್ಲ. ಅದೊಂದು ಸಾಮಾಜಿಕ ಆಂದೋಲನ. ನಮ್ಮ ರಾಜ್ಯವನ್ನು ಸುಂದರಗೊಳಿಸುವ ಪ್ರಯತ್ನ. ನನ್ನ ಕನಸಿನ ಕರ್ನಾಟಕದ ಗುರಿಯೇ ಪ್ರಜ್ಞಾವಂತ ನಾಗರಿಕರ ನಿರ್ಮಾಣ ಮಾಡುವುದಾಗಿದೆ. ಈ ಯೋಜನೆಯಡಿಯಲ್ಲಿ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಮೂರು ರೀತಿಯಲ್ಲಿ ಕೆಲಸ ಮಾಡಬಹುದು. ತಮ್ಮ ಹಳ್ಳಿ, ತಾಲೂಕುಗಳನ್ನು ಅಭಿವೃದ್ಧಿಗೊಳಿಸುವಲ್ಲಿ 50 ಪ್ರತಿಶತ ಕೆಲಸವನ್ನು ನಾವೇ ಮಾಡಬಹುದು. 25 ಪ್ರತಿಶತ ಕೆಲಸವನ್ನು ನಮ್ಮ ತಾಲೂಕಿನ ಅಧಿಕಾರಿಗಳು ಮಾಡುವಂತಹ ಕೆಲಸಗಳು. ಇನ್ನುಳಿದ 25 ಪ್ರತಿಶತದಷ್ಟು ಕೆಲಸ ಮಾಡಲು ರಾಜಕೀಯ ಶಕ್ತಿಬೇಕು.ಅವುಗಳನ್ನು ಸಾಕಾರಗೊಳಿಸುವ ನಾಯಕರ ಆಯ್ಕೆ ಮಾಡುವುದು ನಮ್ಮ ಕೈಲಿದೆ.

ಹೀಗೆ ನಮ್ಮ ಹಳ್ಳಿ, ಊರು, ತಾಲೂಕು, ನಮ್ಮ ರಾಜ್ಯ ನಮ್ಮಿಚ್ಛೆಗೆ ತಕ್ಕಂತೆ ರೂಪುಗೊಳ್ಳಬೇಕು. ಅದಕ್ಕಾಗಿ ನಾವೊಂದು ನೀಲನಕ್ಷೆಯನ್ನು ತಯಾರಿಸಬೇಕು.
ನಮ್ಮ ತಾಲೂಕುಗಳಲ್ಲಿ ಆಯಾ ಕ್ಷೇತ್ರದ ಬುದ್ದಿವಂತರನ್ನು, ಪ್ರಜ್ಞಾವಂತರನ್ನು ಆರಿಸಿ, ಅವರೊಡನೆ ಚರ್ಚೆ ನಡೆಸಿ ನಮ್ಮ ತಾಲೂಕು ಹೇಗಿರಬೇಕೆಂದು ಒಂದು ನೀಲಿನಕ್ಷೆಯನ್ನು ತಯರಿಸೋಣ. ಯಾರಾದರೂ ನಿಮ್ಮ ಊರಿಗೆ ಬಂದು ಕೈಮುಗಿದು ನಿಂತ ಮಾತ್ರಕ್ಕೆ ಅವರಿಗೆ ಮತ ಚಲಾಯಿಸಬೇಕಿಲ್ಲ. ನಾವು ತಯಾರು ಮಾಡಿರುವ ನೀಲಿನಕ್ಷೆಯನ್ನು ಅವರ ಮುಂದಿಟ್ಟು ಐದು ವರ್ಷಗಳ ಕಾಲ ಅದರಂತೆಯೇ ಕೆಲಸ ಮಾಡುವ ಮಾತನ್ನು ನೀಡಿದರೆ ಮಾತ್ರವೇ ಮತ ಚಲಾಯಿಸುವಂತಾಗಬೇಕು. ಯಾವ ಜಾತಿ, ಯಾವ ಪಕ್ಷದವರಾದರೂ ಸರಿ ಅವರ ಮುಂದೆ ನಮ್ಮ ಕನಸುಗಳನ್ನು ಬಿಚ್ಚಿಡೋಣ.ಸದೃಢ ಕುಮಟಾ, ಕರ್ನಾಟಕವನ್ನು ಕಟ್ಟೋಣ.

RELATED ARTICLES  ಮುಂದಿನ ಒಂದು ವಾರ ಮಳೆ‌ ಸಾಧ್ಯತೆ: ಹವಾಮಾನ ಇಲಾಖೆ‌ ಮಾಹಿತಿ.

ಈ ಬಾರಿ ನಮ್ಮ ತಾಲೂಕಿನ ಭವಿಷ್ಯ ಬದಲಾಯಿಸೋಣ.
ನಮ್ಮ ಊರಿನ ಕುರಿತು ನಾವೇ ಕನಸು ಕಾಣೋಣ.
ಅದನ್ನು ನನಸು ಮಾಡಲು ನಾವೇ ಶ್ರಮಿಸೋಣ.
ಬನ್ನಿ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ.
ನಮ್ಮ ಕುಮಟಾವನ್ನು ಶ್ರೇಷ್ಠ ತಾಲೂಕನ್ನಾಗಿಸೋಣ.

ನಿಮ್ಮ ಕನಸುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ WA 9980977963