ಯಲ್ಲಾಪುರ: ಜಿಲ್ಲಾಮಟ್ಟದ ಸಾಂಸ್ಕೃತಿಕ ಹಾಗೂ ಪಠ್ಯ ಸ್ಪರ್ಧೆಯಲ್ಲಿ ವೈಟಿಎಸ್ ಎಸ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು. ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪ್ರೀಮಿಯರ್ ವಿಜ್ಞಾನ-ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸ್ಫರ್ಧೆ ನಡೆದಿತ್ತು. ವೈಟಿಎಸ್ ಎಸ್ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶ್ರೇಯಾ ಪೈ ಭಾವಗೀತೆಯಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡರು. ಕೃತಿಕಾರಾಣಿ ಏಕಪಾತ್ರಾಭಿನಯದಲ್ಲಿ ಪ್ರಥಮ, ಐಶ್ವರ್ಯಾ ಆಚಾರ್ಯ ಆಶು ಭಾಷಣದಲ್ಲಿ ದ್ವಿತೀಯ, ಯದುನಂದನ ಭಟ್ಟ ಹಾಗೂ ಚಿನ್ಮಯ ಭಟ್ ರಸ ಪ್ರಶ್ನೆಯಲ್ಲಿ ದ್ವಿತೀಯ, ಮಧುರಾ ಶಾನಭಾಗ ಕನ್ನಡ ಪ್ರಬಂಧದಲ್ಲಿ ತೃತೀಯ, ಇಂಪನಾ ನಾಯಕ ಇಂಗ್ಲೀಷ್ ಪ್ರಬಂಧದಲ್ಲಿ ತೃತೀಯ ಸ್ಥಾನಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

RELATED ARTICLES  ಕುಮಟಾದಲ್ಲಿ ಯಶಸ್ವಿಯಾದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಗುರುವಂದನಾ ಕಾರ್ಯಕ್ರಮ.

ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಉಪನ್ಯಾಸಕ ಮನೋಹರ ಶಾನಭಾಗ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಗಜಾನನ ಬಾಬುರಾವ ಭಟ್ಟ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ, ಆಡಳಿತ ಮಂಡಳಿಯ ಸದಸ್ಯರೂ , ಪ್ರಾಂಶುಪಾಲ ಜಯರಾಮ ಗುನಗಾ ಅಭಿನಂದಿಸಿದರು.

RELATED ARTICLES  ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮ : ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 29 ರಂದು