ಭಟ್ಕಳ: ಆರ್ಟ್ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಟ್ಕಳದ ಯುವಕ, ಮಿಸ್ಟರ್ ಸೌತ್ ಕರ್ನಾಟಕ ಆಗಿ ವಿನು ಮಾನಕಾಮೆ ಹೊರಹೊಮ್ಮಿದ್ದಾರೆ.

ಅತ್ಯಂತ ಚುರುಕಿನ ಯುವಕ ವಿನಾಯಕ ಮಾರುತಿ ಶೇಟ್, ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ನೃತ್ಯ, ನಾಟಕ, ಫೋಟೋಗ್ರಫಿಯಲ್ಲಿ ಹಾಗೂ ಕಿರುಚಿತ್ರ ತಯಾರಿಕೆಯಲ್ಲಿಯೂ ಕೂಡಾ ಆಸಕ್ತಿ ಹೊಂದಿದವನಾಗಿದ್ದಾನೆ.

RELATED ARTICLES  ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ವ್ಯಕ್ತಿ ಪೋಲೀಸ್ ಬಲೆಗೆ!

ಆರ್ಟ್ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಇವರು ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಎರ್ಪಡಿಸಿದ್ದ ಅಡಿಶನ್‍ನಲ್ಲಿ 300 ಜನ ಸಹ ಸ್ಪರ್ಧಿಗಳಲ್ಲಿ ಭಾಗವಹಿಸಿದ್ದ ಈತ ಅಂತಿಮವಾಗಿ 23ರಲ್ಲಿ ನಡೆದ ಅಂತಿಮ ಹಂತದಲ್ಲಿ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾನೆ. ಅಕ್ಟೋಬರ್’ನಲ್ಲಿ ಮಂಗಳೂರಿನ ರಿವರ್‍ಡೇಯಲ್ಲಿ ನಡೆದ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರ ಹೊಮ್ಮುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

RELATED ARTICLES  ಸ್ವಿಮ್ಮಿಂಗ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ಪಿಯು ವಿದ್ಯಾರ್ಥಿಗಳು

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾಗಳಿಂದ ಸ್ಪರ್ಧಿಗಳು ಆಗಮಿಸಿದ್ದು ಅವರೆಲ್ಲನ್ನು ಹಿಂದಿಕ್ಕಿದ ವಿನು ಮಾನಕಾಮೆ ಕರ್ನಾಟಕ ಕೆಟಗರಿಯಿಂದ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಆತನ ಸ್ನೇಹಿತರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.