ಹೊನ್ನಾವರ :ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀ ಬಟ್ಟೆ ವಿನಾಯಕ ಯುವಕ ಸಂಘ ಕೊರೆ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರ ತಾಲೂಕಾ ಅಮ್ಯುಚರ್ ಕಬಡ್ಡಿ ಅಸೋಸಿಯೇಷನ್ ಇವರ ಸಹಕಾರದಲ್ಲಿ ನಾಲ್ಕನೇ. ವರ್ಷದ ತಾಲೂಕಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಹೊನ್ನಾವರ ತಾಲೂಕಿನ ಖರ್ವಾದ ಕೊಳಗದ್ದೆಯಲ್ಲಿ ನಡೆಯಿತು. ಪಂದ್ಯಾವಳಿಯನ್ನು ಶಾಸಕ ಮಂಕಾಳ ವೈದ್ಯರವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಉತ್ತಮ ಶರೀರ ಹೊಂದಿದವನು ಉತ್ತಮ ಜೀವನ ನಡೆಸಬಲ್ಲ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾದರೂ ತೊಡಗಿಸಿಕೊಳ್ಳುವಿಕೆ ಮುಖ್ಯ ಎಂದರು.

RELATED ARTICLES  ಬೈಕ್ ಕದ್ದೊಯ್ಯುವಾಗ ಸ್ಕಿಡ್ ಆಗಿ ಬಿದ್ದ ಕಳ್ಳ : ಇದೀಗ ಪೊಲೀಸರ ಅತಿಥಿ

ಇದೇ ಸಂದರ್ಭದಲ್ಲಿ ವಕೀಲರಾದ ಕೆ.ಟಿ ಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಉನ್ನತ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

RELATED ARTICLES  ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳಿ : ಭಾಸ್ಕರ ಪಟಗಾರ.

ಈ ಸಂಧರ್ಬದಲ್ಲಿ ಕೃಷ್ಣ ಗೌಡ, ತಿಲಕ್ ಗೌಡ, ಕೃಷ್ಣಮೂರ್ತಿ ಭಟ್, ಜಗದೀಶ್ ತಾಂಡೇಲ್ ಉಪಸ್ಥಿತರಿದ್ದರು.