ಪಳ್ಳತ್ತಡ್ಕ:- “ಶ್ರೀಗುರುಗಳ ಆಶೀರ್ವಾದ ನಮಗೆ ಶ್ರೀ ರಕ್ಷೆ, ಗುರುಸಂಕಲ್ಪ ಕಾರ್ಯ ನೆರವೇರಿಸಿದರೆ ನಮ್ಮ ಜೀವನ ಸಾರ್ಥಕ”ಎಂದು ವಿದ್ವಾನ್ ಶ್ರೀ ಕೇಶವಕಿರಣ, ಬಾಕಿಲಪದವ್ ಹೇಳಿದರು. ಅವರು ನವಂಬರ್ 11 ರಂದು ಪಳ್ಳತ್ತಡ್ಕ ಮುದ್ದು ಮಂದಿರದಲ್ಲಿ ಪಳ್ಳತ್ತಡ್ಕ ಹವ್ಯಕ ವಲಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಧಾರ್ಮಿಕ ಪ್ರವಚನ ನೀಡುತ್ತ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮ ಗಳು ಜರಗಿತು.

ವೇ.ಮೂ ಪರಮೇಶ್ವರ ಭಟ್ ಪಳ್ಳತ್ತಡ್ಕ,ಶಂಕರ ಭಟ್ ಪಳ್ಳತ್ತಡ್ಕ ಇವರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಸತ್ಯನಾರಾಯಣ ಪೂಜೆ ಸಂಪನ್ನಗೊಂಡಿತು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಹೆಲ್ತ್ ಬುಲೆಟಿನ್

IMG 20171112 WA0001

ಕುಂಕುಮಾರ್ಚನೆ, ವಿಷ್ಣು ಸಹಸ್ರನಾಮ, ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ಈ ಸಂದರ್ಭದಲ್ಲಿ ನೆರವೇರಿತು.

ಭೋಜನವಿರಾಮದ ನಂತರ ವಲಯ ಸಭೆ ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಆರಂಭವಾಯಿತು. ವಲಯದಲ್ಲಿ ರಾಮಾಯಣ ಪಾರಾಯಣ ಮಾಡಿದವರಿಗೆ ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀ ಕೃಷ್ಣ ಭಟ್ ಸ್ಮರಣಿಕೆ ನೀಡಿ, ವಲಯ ಕಾರ್ಯಗಳ ಬಗ್ಗೆ ಮೆಚ್ಚಿಗೆ ಸೂಚಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ.ಕೆ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ವಿವಿಧ ಪದಾಧಿಕಾರಿಗಳು ವರದಿ ವಾಚಿಸಿದರು. ಮಂಡಲ ಪ್ರಮುಖರಾದ ಉಪಾಧ್ಯಕ್ಷ ಕುಮಾರ ಪೈಸಾರಿ ಮಾತೃ ವಿಭಾಗದ ಕುಸುಮ ಭಟ್,ವಿದ್ಯಾರ್ಥಿವಾಹಿನೀ ಯ ಕೇಶವಪ್ರಸಾದ ಎಡಕ್ಕಾನ , ವಿವಿಧ ಮಾಹಿತಿ ನೀಡಿದರು.

RELATED ARTICLES  ಶಾಲೆಗೆ ಫೀ ಕಟ್ಟಿಲ್ಲವೆಂದು ಮಕ್ಕಳನ್ನು ನೆಲ ಮಾಳಿಗೆಯಲ್ಲಿ ಕೂಡಿಟ್ಟರು!

ಹೆಚ್ಚಿನ ಸಂಖ್ಯೆಯಲ್ಲಿ ಅಖಿಲ ಹವ್ಯಕ ಮಹಾಸಭಾದ ಸದಸ್ಯ ರಾಗುವಂತೆ ಪತ್ತಡ್ಕ ಗಣಪತಿ ಭಟ್ ಕರೆ ನೀಡಿದರು.ಮಠ ಮತ್ತು ಸಮಾಜ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳವಂತೆ ವಲಯ ಅಧ್ಯಕ್ಷ ಜಿ.ರಾಮಕೃಷ್ಣ ಭಟ್ ಹೇಳಿದರು.

ಗುರುಕ್ಕಾರರು, ಪದಾಧಿಕಾರಿಗಳು,ಶ್ರೀ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು. ರಾಮತಾರಕ ಮಂತ್ರ, ಶಾಂತಿ ಮಂತ್ರ, ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.