ಕಾರವಾರ: ಅಸ್ನೋಟಿಕರ್‌ ರಾಜಕೀಯ ಮರುಪ್ರವೇಶಕ್ಕೆ ಆಗ್ರಹಿಸಿ ಅಪಾರ ಸಂಖ್ಯೆಯ ಬೆಂಬಲಿಗರು ಭಾನುವಾರ ಅಸ್ನೋಟಿಕರ್‌ ಅವರ ಮನೆ ಮುಂದೆ ಜಮಾಯಿಸಿದ್ದರು.ಎಲ್ಲ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಆನಂದ ಅಸ್ನೋಟಿಕರ್
ಅಂಕೋಲಾ – ಕಾರವಾರ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೆ ರಾಜಕಾರಣಕ್ಕೆ ಬರುವೆ ಎಂಬ ನಿರ್ಧಾರ ಪ್ರಕಟಿಸಿದರು.

RELATED ARTICLES  ವಶವಾಯ್ತು ಗೋವಾ ಮದ್ಯ: ಆರೋಪಿ ಎಸ್ಕೇಪ್

ಕಳೆದ ನಾಲ್ಕೂವರೆ ವರ್ಷಗಳಿಂದ ಪಕ್ಷದ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರದ ಇವರು ಕಳೆದ ಚುನಾವಣೆಯಲ್ಲಿ 36 ಸಾವಿರ ಮತಗಳಿಂದ ಸೋಲು ಕಂಡಿದ್ದೆ. ನಾನು ಮಾಡಿದ ಕೆಲವು ತಪ್ಪುಗಳು ಈ ಫಲಿತಾಂಶಕ್ಕೆ ಕಾರಣವಾಗಿತ್ತು. ನನ್ನ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದನ್ನು ಮನಗಂಡ ಕ್ಷೇತ್ರದ ಜನರು ಮತ್ತೆ ರಾಜಕಾರಣಕ್ಕೆ ಬರಬೇಕೆಂದು ಒತ್ತಡ ಹಾಕುತ್ತಿದ್ದಾರೆ. ನವೆಂಬರ್ 15ರ ನಂತರ ಕ್ಷೇತ್ರದಲ್ಲಿ ಸಂಚರಿಸಿ, ಹಿರಿಯರ ಸಲಹೆಗಳನ್ನು ಪಡೆದು ಮುಂದುವರಿಯುವೆ ಎಂದರು.

RELATED ARTICLES  ಬಸ್ ಬಡಿದು ಪಾದಾಚಾರಿ ಸಾವು