ದಾಂಡೇಲಿ : ಕಣ್ಣಿನ ತಪಾಸಣೆ ಹಾಗೂ ಎಲುಬು ಮತ್ತು ಕೀಲು ರೋಗಿಗಳ ತಪಾಸಣೆ ಶಿಬಿರ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಲಯನ್ಸ್ ಕ್ಲಬ್, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್, ಜಿಲ್ಲಾ ಆರೋಗ್ಯ ಕೇಂದ್ರ, ಸ್ಥಳೀಯ ಆಸ್ಪತ್ರೆ, ಹುಬ್ಬಳ್ಳಿ ಡಾ. ಹುರಳಿಕೊಪ್ಪ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಶಿಬಿರದಲ್ಲಿ 60 ಮಂದಿಗೆ ಉಚಿತ ಕಣ್ಣಿನ ಪೊರೆ ಚಿಕಿತ್ಸೆ, ನಾಲ್ಕು ಎಲುಬು ಮತ್ತು ಕೀಲು ಚಿಕಿತ್ಸೆ ನೀಡಲಾಯಿತು. ಸುಮಾರು 260 ಕಣ್ಣಿನ ತಪಾಸಣೆಗೆ ಹಾಗೂ 180 ಎಲುಬು ಮತ್ತು ಕೀಲು ತಪಾಸಣೆಗೆ ಶಿಬಿರಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲಾಯಿತು.

RELATED ARTICLES  ದಾಂಡೇಲಿಯಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ಬೈಕ್ ರ್ಯಾಲಿ ಇಂದು

ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ನಾಗೇಶ ಸಾಳುಂಕೆ ಉದ್ಘಾಟಿಸಿದರು. ಹುಬ್ಬಳ್ಳಿಯ ಡಾ.ಅಶೋಕ ಬಂಗಾರಶೆಟ್ಟರ್, ನಗರಸಭೆ ಉಪಾಧ್ಯಕ್ಷ ಮಹಮ್ಮದ್ ಫನಿಬಂದ್, ಕಾಗದ ಕಾರ್ಖಾನೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಜಿ ಗಿರಿರಾಜ, ಹಿರಿಯ ಲಯನ್ಸ್ ಸದಸ್ಯ ಡಾ.ಎನ್.ಜಿ ಬ್ಯಾಕೊಡ್, ಹುಬ್ಬಳ್ಳಿಯ ನೇತ್ರ ತಜ್ಞ ಡಾ. ಆರತಿ ಜೈನ್, ಸ್ಥಳೀಯ ವೈದ್ಯಾಧಿಕಾರಿ ಡಾ. ರಾಜೇಂದ್ರ ಪ್ರಸಾದ, ಕಣ್ಣಿನ ತಜ್ಞ ಡಾ. ವಿಜಯಕುಮಾರ, ಲಯನ್ಸ್ ಕಾರ್ಯಕ್ರಮ ಸಂಯೋಜಕ ಮಾರುತಿರಾವ್ ಮಾನೆ ಉಪಸ್ಥಿತರಿದ್ದರು.

RELATED ARTICLES  ಹೆತ್ತ ಮಗುವನ್ನೂ ಎಸೆದ ತಾಯಿ : ಏನೂ ಅರಿಯದ ಹಸುಳೆ ಸಾವು: ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಪೋಲೀಸರು.