ಕಾರವಾರ: ತಾಲೂಕಿನ ಮಾಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವನದೇವಿ ಗೆಳೆಯರ ಬಳಗ ದೇವಿಮನೆ ಕ್ರಾಸ್ ಇವರ ಆಶ್ರಯದಲ್ಲಿ ನಾಲ್ಕನೇ ವರ್ಷದ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮಾಗೋಡ ಚೆಕ್ ಪೋಸ್ಟ್ ಬಳಿ ವನದೇವಿ ಕ್ರೀಡಾಂಗಣದಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಮುಖಂಡರಾದ ಸುನೀಲ್ ನಾಯ್ಕ, ದೀಪ ಬೆಳಗಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ. ನಾವು ಫೈನಲ್ ಗೆದ್ದು ಬಂದು ದುಡ್ಡನ್ನು ಪಾರ್ಟಿ ಮಾಡಿ ಹಾಳು ಮಾಡಿದ್ದೆವು. ಆ ತಪ್ಪನ್ನು ನೀವೂ ಮಾಡಬೇಡಿ. ನೀವು ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಹೋಗುವಂತಾಗಲಿ ಎಂದು ಹಾರೈಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಿ ಹಾಗೂ ನಾನು ನಿಮ್ಮ ಜೊತೆ ಸದಾ ಇರುತ್ತೇನೆ. ಇಲ್ಲಿರುವ ಕ್ರೀಡಾಂಗಣ ಸಮಸ್ಯೆಯನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಳಕೂರ ಗ್ರಾಮ ಪಂಚಾಯತ ಸದಸ್ಯರಾದ ಗಣಪತಿ ನಾಯ್ಕ ಮಾತನಾಡಿ, ನೀವು ಯುವಕರಿದ್ದೀರಿ. ಇಂತಹ ಗ್ರಾಮಗಳಲ್ಲಿ ಕ್ರೀಡೆಯ ಜೋತೆಗೆ ಉಚಿತ ಆರೋಗ್ಯ ಶೀಬಿರದಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ, ಮಾಜಿ ತಾಲೂಕಾ ಪಂಚಾಯತ ಸದಸ್ಯೆ ಜಯಂತಿ ನಾಯ್ಕ, ಟಿ ಎಸ್ ಹೆಗಡೆ, ಮಾರುತಿ ನಾಯ್ಕ, ಕೇಶವ ನಾಯ್ಕ, ನಾರಾಯಣ ನಾಯ್ಕ, ಎಮ್ ಟಿ ನಾಯ್ಕ, ಸೂರಿ ಭಟ್ಟ, ಕೇಶವ ನಾಯ್ಕ ಕೋಂಡದಕುಳಿ, ರಾಜೇಶ ಪುಜಾರಿ ಜಿನ್ನೋಡ, ಲಕ್ಷ್ಮಿಸ್ ಆಚಾರಿ ಮುಂತಾದವರು ಇದ್ದರು.