ಖ್ಯಾತ ಲೇಖಕಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರ ಕೊಲೆಗೈದು ತಿಂಗಳುಗಳು ಕಳೆದರೂ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡಿದ ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ, ಗೌರಿ ಲಂಕೇಶ್ ರನ್ನು ಸರಕಾರವೇ ಕೊಲೆಗೈದಿರಬಹುದು. ಆದ್ದರಿಂದ ಇಷ್ಟು ದಿನಗಳಾದರೂ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದರು. ಎಡಪಂಥೀಯರ ಹಿಂದೂವಿರೋಧಿ ಷಡ್ಯಂತ್ರ ಬಯಲು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರವು ಹತ್ಯೆ ಮಾಡಿಲ್ಲ ಎಂಬುವುದನ್ನು ಸಾಬೀತುಪಡಿಸಲಿ ಎಂದರು.

RELATED ARTICLES  ಕಾಂಗ್ರೆಸ್ ನವರು ಕ್ರಿಮಿನಲ್ ಬುದ್ಧಿಯುಳ್ಳವರು : ಸಿಟಿ ರವಿ

ದಾಭೋಲ್ಕರ್‌, ಪನ್ಸಾರೆ ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಹೊರಬೀಳುತ್ತಿದೆ. ಸದ್ಯವೇ ಸತ್ಯ ಹೊರಬರುವ ನಿರೀಕ್ಷೆ ಇದೆ. ಅದೇ ರೀತಿ ಗೌರಿ ಹತ್ಯೆಯ ನೈಜ ಆರೋಪಿಯನ್ನು ಸರ್ಕಾರ ಆದಷ್ಟು ಬೇಗ ಪತ್ತೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿರುವುದಾಗಿ ಅವರು ಹೇಳಿದರು. ಬಲಪಂಥೀಯರೇ ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಿದ್ದಾಗಿ ನಟ ಪ್ರಕಾಶ್‌ ರೈ ಅವರು ಹೇಳುತ್ತಿದ್ದಾರೆ. ಕೊಲೆಗಾರರ ಬಗ್ಗೆ ಅಷ್ಟು ಸ್ಪಷ್ಟ ಮಾಹಿತಿ ಇದ್ದರೆ ಅವರನ್ನು ವಿಚಾರಣೆಗೊಳಪಡಿಸಿ. ಹೊಡೆದು ಬಾಯಿಬಿಡಿಸಬೇಕು’ ಎಂದರು.

RELATED ARTICLES  ಪ್ರೀತಿಯ ಪ್ರಧಾನಿಗೊಂದು ಬಹಿರಂಗ ಪತ್ರ.