ಬೆಂಗಳೂರು: ಐಟಿ ದಿಗ್ಗಜ ವಿಪ್ರೋ ಕಂಪನಿಗೆ ಬುಧವಾರ ಮತ್ತೊಂದು ಬೆದರಿಕೆ ಮೇಲ್ ಬಂದಿದ್ದು, 500 ಕೋಟಿ ರು ಹಣ ನೀಡುವಂತೆ ಬೇಡಿಕೆ ಇಡಲಾಗಿದೆ.
72 ಗಂಟೆಗಳಲ್ಲಿ ಹಣ ನೀಡಬೇಕು ಇಲ್ಲದಿದ್ದರೇ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. ಕಳೆದ ಒಂದು ತಿಂಗಳಲ್ಲಿ ಬಂದಿರುವ ಎರಡನೇ ಬೆದರಿಕೆ ಮೇಲ್ ಇದಾಗಿದೆ.
20 ದಿನದಲ್ಲಿ 500 ಕೋಟಿ ರುಪಾಯಿ ಕೊಡಿ ಇಲ್ಲದಿದ್ದರೆ ಕಚೇರಿ ಆವರಣ ಸೇರಿದಂತೆ ಹಲವು ಕಡೆ ವಿಷಕಾರಿ ಪ್ರೋಟೀನ್ ಡ್ರಗ್ ಹಾಕುತ್ತೇವೆ ಎಂದು ಕಳೆದ ಮೇ 5 ರಂದು ಬೆದರಿಕೆ ಹಾಕಲಾಗಿತ್ತು.
ಎರಡನೇ ಬಾರಿಗೆ ಬೆದರಿಕೆ ಈ ಮೇಲ್ ಬಂದಿರುವುದನ್ನು ವಿಪ್ರೋ ಸಂಸ್ಥೆ ಸ್ಪಷ್ಟ ಪಡಿಸಿದೆ. ಕಂಪನಿಗಳಿರುವ ಎಲ್ಲಾ ಪ್ರದೇಶಗಳಲ್ಲಿಯೂ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸಂಸ್ಥೆಯ ದೈನಂದಿನ ಕಾರ್ಯ ಚಟುವಟಿಗೆಳ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಹೇಳಿದೆ.
ಎರಡು ಮೇಲ್ ಗಳು ಸ್ವಿಟ್ಜರ್ ಲ್ಯಾಂಡ್ ನ ಒಂದೇ ಐಪಿ ಮತ್ತು ಐಡಿ ವಿಳಾಸದಿಂದ ಬಂದಿವೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. [email protected] ಮೇಲ್ ಐಡಿಯಿಂದ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಿದ್ದಾರೆ.