ಸಾಮಾನ್ಯವಾಗಿ ಯಾರೇ ಆಗಲಿ ಕೋಟ್ಯಂತರ ಆಸ್ತಿ ಇದೆ ಎಂದರೆ ಕಾಲು ಮೇಲೆ ಕಾಲು ಹಾಕಿ ತಿನ್ನಬಹುದು ಎಂದುಕೊಳ್ಳುತ್ತಾರೆ. ಜೀವನವನ್ನು ಹಾಯಾಗಿ ಕಳೆಯಬಹುದು. ಮನೆಯಲ್ಲೆಲ್ಲಾ ಆಳುಕಾಳು ತುಂಬಿರುತ್ತಾರೆ. ಜೀವನ ಸುಖದ ಸುಪ್ಪತ್ತಿಗೆ ಎಂದುಕೊಳ್ಳುತ್ತಾರೆ. ಆದರೆ ಈ ದಂಪತಿಗಳಿಗೆ ಎಲ್ಲವೂ ಸಾಕೆನ್ನಿಸಿತೋ ಏನೋ….ಇಬ್ಬರೂ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಸಂಸಾರ ಜೀವನವನ್ನು ತ್ಯಾಗ ಮಾಡಿ ಸನ್ಯಾಸತ್ವಕ್ಕೆ ಸಿದ್ಧರಾಗಿದ್ದಾರೆ. ಅದೂ ಒಂದು ಎರಡು ಕೋಟಿ ಅಲ್ಲ ನೂರು ಕೋಟಿ ಆಸ್ತಿಯನ್ನು ಬಿಟ್ಟು ಇವರು ಸನ್ಯಾಸಿಗಳಾಗಲು ಹೊರಟಿದ್ದಾರೆ. ಜತೆಗೆ ತಮ್ಮ ಮಗಳನ್ನೂ ಬಿಟ್ಟು ಸಂಸಾರ ಬಂಧನ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ.
ಮಧ್ಯಪ್ರದೇಶದ ಸುಮಿತ್, ಅನಾಮಿಕಾ ದಂಪತಿಗಳು ತಮ್ಮ ಮೂರು ವರ್ಷದ ಮಗಳು ಸೇರಿದಂತೆ ರೂ.100 ಕೋಟಿ ಆಸ್ತಿಯನ್ನು ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ಸಿದ್ಧವಾಗಿದ್ದರೆ. ಇದೇ ತಿಂಗಳು 23ರಂದು ಸೂರತ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ದಂಪತಿಗಳು ಜೈನ ಸನ್ಯಾಸಿಗಳಾಗಿ ಬದಲಾಗಲಿದ್ದಾರಂತೆ.