ಯಲ್ಲಾಪುರ ; ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಉಪಾಧ್ಯಕ್ಷ ಶಂಶುದ್ದೀನ್ ಮಾರ್ಕರ ಮತ್ತಿತರರು ತಹಶೀಲ್ದಾರ್ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಅವರು ಯಲ್ಲಾಪುರದ ತಹಶೀಲ್ದಾರ ಡಿ ಜಿ ಹೆಗಡಯವರಿಗೆ ಮನವಿ ನೀಡಿ, ಪೊಲೀಸ್ ಸಿಬ್ಬಂದಿಗಳು ವಾಸ್ತವ್ಯ ಮಾಡುವ ವಸತಿ ಗ್ರಹಗಳ ಗೋಡೆಗಳು ಬಿರುಕು ಬಿಟ್ಟಿವೆ. ಮಳೆಗಾಲದ ಸಮಯದಲ್ಲಿ ಹಂಚಿನಿಂದ ನೀರು ತೋರುತ್ತಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಿವಿಲ್ ಪೊಲೀಸರು ಹಾಗೂ ಸಶಸ್ತ್ರ ಮೀಸಲು ಪಡೆಯ ಪೊಲೀಸರು ವಸತಿ ಗೃಹಗಳನ್ನು ಅರ್ ಸಿ ಸಿ ಮನೆಗಳಾಗಿ ಪರಿವರ್ತಿಸಬೇಕು. ಮತ್ತು ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಂತೆ ಪೊಲೀಸರಿಗೆ ಹೆಚ್ಚಿನ ಸಂಬಳ ಹಾಗೂ ಭತ್ತೆ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

RELATED ARTICLES  ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ.

ಜೀರ್ಣಾವಸ್ಥೆಗೆ ತಲುಪಿರುವ ವಸತಿ ಗ್ರಹಗಳಿಂದ ಏನಾದರೂ ಅನಾಹುತ ಸಂಭವಿಸಿ ಪೊಲೀಸರು ಅಥವಾ ಕುಟುಂಬಸ್ಥರಿಗೆ ಅಪಾಯವಾದರೆ ಅದಕ್ಕೆ ನೇರವಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹೊಣೆಯಾಗಲಿದೆ, ಎಂದಿರುವ ಅವರು ಅಂತಹ ಸಂದರ್ಭದಲ್ಲಿ ಕರ್ನಾಟಕ ರಕ್ಷಣ ವೇದಿಕೆ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ NTSE ಕಾರ್ಯಾಗಾರ.

ಈ ಸಂದರ್ಭದಲ್ಲಿ ತಾಲೂಕಿನ ಕರವೇ ಪ್ರಮುಖರಾದ ಕಿರಣ್ ನಂದುಲಾಲ, ಅಲಿ ಕೆ ಹಮೀದ, ಮಂಜುನಾಥ ಮಾದರ, ವಿಜಯ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿದ್ದರು. ತಹಶೀಲ್ದಾರ ಡಿ ಜಿj ಹೆಗಡೆ ಮನವಿ ಸ್ವೀಕರಿಸಿ ರವಾನಿಸುವ ಭರವಸೆ ನೀಡಿದರು.