ಭಾರತದ ಈಗಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರ ಮಗಳಾದ ಸ್ವಾತಿಯು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯು ಪ್ರಮೋಶನ್ ಮಾಡುವ ಬದಲು ಡಿಮೋಶನ್ ಮಾಡಿ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ.

ಯಾವತ್ತೂ ತನ್ನ ಹೆಸರಿನ ಮುಂದೆ ಸರ್ ನೇಮ್ ಬಳಸದ ಸ್ವಾತಿಯವರು ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ Boeing 787 ಮತ್ತು Boeing 777 ವಿಮಾನದಲ್ಲಿ ಪಾರಿಚಾರಿಕೆಯಾಗಿ (Air hostess) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಭದ್ರತೆಯ ದೃಷ್ಟಿಯಲ್ಲಿ ಎಂಬ ಕಾರಣ ನೀಡಿ ಅವರನ್ನು ಕಚೇರಿಯ ಗ್ರೌಂಡ್ ಸ್ಟಾಫ್ ಆಗಿ ವರ್ಗಾಯಿಸಲಾಗಿದೆ ಎಂದು ಏರ್ ಇಂಡಿಯಾ ಮುಖ್ಯ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES  ದಿನಾಂಕ 18/06/2019ರ ದಿನ ಭವಿಷ್ಯ ಇಲ್ಲಿದೆ.

ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಪ್ರಧಾನಿ ಮೋದಿಯವರೊಂದಿಗೆ ರಾಷ್ಟ್ರಪತಿ ಕೋವಿಂದ್ ರವರು ಗಣ್ಯ ವ್ಯಕ್ತಿಯ ಮದುವೆಯಲ್ಲಿ ಪಾಲ್ಗೊಂಡಾಗ, ಓರ್ವ ರಾಷ್ಟ್ರಪತಿಗೆ ಗೌರವ ಸಿಗದಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು. ವೈರಲ್ ಆಗಿದ್ದ ವಿಡಿಯೋದ ಬೆನ್ನಲ್ಲೇ ಅವರ ಮಗಳನ್ನು ಹುದ್ದೆಯಲ್ಲಿ ಡಿಮೋಶನ್ ಮಾಡಿರುವುದು ಆಶ್ಚರ್ಯ ಚಕಿತವಾಗಿದೆ.

RELATED ARTICLES  ಆರ್‌ಟಿಇ ಶಿಕ್ಷಣ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ