ಶಿರಸಿ : ಅಧಿವೇಶವನ್ನು ಬೆಳಗಾವಿಯಲ್ಲಿ ಆಯೋಜನೆ ಮಾಡುವುದು ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವಂತಹ ಕ್ರಮಗಳನ್ನು ಚರ್ಚಿಸಲು. ಆದರೆ ಬಿಜೆಪಿಯವರು ಅಲ್ಲಿ ಗಲಾಟೆಯ ವಿಚಾರ ಮಾಡುತ್ತಾರೆ. ಅದು ಸಲ್ಲ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಇಲ್ಲಿನ ಲೊಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಕೆ.ಜೆ.ಜಾರ್ಜ ರಾಜಿನಾಮೆ ನೀಡದೇ ಹೋದಲ್ಲಿ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಿಜೆಪಿಯವರು ಬೇಕಾದರೆ ಬೀದಿಯಲ್ಲಿ ರಂಪ ಮಾಡಿಕೊಳ್ಳಲಿ. ಈಗಾಗಲೇ ಪರಿವರ್ತನಾ ರ್ಯಾಲಿ ಎಂದು ಅದೇ ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿವೇಶನವನ್ನು ಸರಿಯಾಗಿ ನಡೆಯಲು ಬಿಡಬೇಕು. ಅಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡಿಕೊಳ್ಳಬೇಕು. ಅಲ್ಲಿ ರಾಜಕೀಯ ಮಾಡಬಾರದು. ನೀರಿನ ಅಭಿವೃದ್ಧಿ ಗಳಂತಹ ಉತ್ತಮ ವಿವಾರಗಳ ಕುರಿತು ಸಂವಾದ ಆಗಬೇಕಿದೆ ಎಂದರು.

RELATED ARTICLES  ಹೆಗಡೆ ಹೆಣ್ಣುಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ದೇವಸ್ಥಾನಗಳಿಗೆ ವ್ಯವಸ್ಥಾಪನಾ ಕಮೀಟಿಗಳ ರಚನೆಯ ಅಂಗವಾಗಿ ಮುಖ್ಯಮಂತ್ರಿಗಳ ಒಪ್ಪಿಗೆ ಮೇರೆಗೆ ಒಂದು ಸಮಿತಿಯನ್ನು ರಚನೆ ಮಾಡಿ ಹೊಸ ವಿದೇಯಕವನ್ನು ಜಾರಿಗೆ ತರಲು ಚಿಂತನೆ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಮಳೆಗಾಲದ ಕೊನೆಯಲ್ಲಿ ಮಳೆ ಬಿದ್ದರೂ ಸಹ 176 ತಾಲೂಕುಗಳಲ್ಲಿ ಅರ್ಧದಷ್ಟು ತಾಲೂಕುಗಳು ಅಂತರ್ಜಲದ ಕೊರತೆ ಎದುರಿಸುತ್ತಿವೆ. ಅಂತರ್ಜಲ ಹೆಚ್ಚಿಸುವುದಕ್ಕೆ ಕೆರೆಗಳ ಅಭಿವೃದ್ಧಿ ಅಗತ್ಯವಾಗಿದೆ. ಆದರೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 40ಹೆಕ್ಟೇರ್ ಒಳಗಿನ ಕೆರೆಗಳು ಬರುವಿದಲ್ಲ. ಇಂತಹ 28ಸಾವಿರ ಕೆರೆಗಳು ರಾಜ್ಯದಲ್ಲಿವೆ. ಅವೆಲ್ಲವನ್ನು ಒಂದೇ ವ್ಯಾಪ್ತಿಯಲ್ಲಿ ತಂದು ಜೀರ್ಣೊದ್ಧಾರ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸುತ್ತೇವೆ ಎಂದರು.

RELATED ARTICLES  ದೇವಾಲಯದಲ್ಲಿ ಅರಿಶಿನ ಕುಂಕುಮ ಕಾರ್ಯಕ್ರಮ

ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ಸಿ.ಎಫ್.ನಾಯ್ಕ, ತಾ.ಪಂ.ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗ್ವತ್ ಮುಂತಾದವರು ಇದ್ದರು.