ಕುಮಟಾ ತಾಲೂಕಿನ ದಿವಗಿಯಲ್ಲಿ ನವೆಂಬರ್ 23ರಂದು ನಡೆಯುವ ಹಾಲಕ್ಕಿ ಒಕ್ಕಲಿಗರ ಸಮುದಾಯಭವನದ ಶಿಲಾನ್ಯಾಸ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದ ಕುರಿತು ಪೂರ್ವಬಾವಿ ಸಭೆಯನ್ನು ದಿವಗಿಯ ಡಿ.ಜೆ.ವಿ.ಎಸ್ ಪ್ರೌಢ ಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ನೀಲಪ್ಪ ಗೌಡ ಮಾತನಾಡಿ ಈ ಅಡಿಗಲ್ಲು ಸಮಾರಂಭ ನಮ್ಮ ಸಮಾಜದ ಮೂಲ ಆಧಾರಸ್ಥಂಭವಾಗಿದೆ, ಇದರಲ್ಲಿ ರಾಜಕಿಯ ಬೇಡ. ನಮ್ಮ ಸಮುಧಾಯದ ಬೆಳವಣಿಗೆಗೆ ಅವಶ್ಯವಾಗಿದೆ, ಜೊತೆಗೆ ನಮ್ಮ ಸಮಾಜ ಇನ್ನಷ್ಟು ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದ ಅವರು ಈ ಸಮಾರಂಭಕ್ಕಾಗಿ ಸಮಾಜದ ಮುಖಂಡರು ಜನರ ಮನೆ ಬಾಗಿಲಿಗೆ ಹೋಗಬೇಕಾಗಿದೆ ಎಂದರು..

RELATED ARTICLES  ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸಲು ಹೋಗಿದ್ದ ವ್ಯಕ್ತಿ ಸಾವು.

ಹಾಲಕ್ಕಿ ಒಕ್ಕಲಿಗರ ಸಂಘದ ಮುಖಂಡ ಗೀರಿಯಾ ಗೌಡ ಮಾತನಾಡಿ ನಮ್ಮ ಸಮಾಜಕ್ಕೆ ಒಬ್ಬರು ಗುರು ಎಂದು ಇಲ್ಲಾವಾಗಿತ್ತು. ಎಲ್ಲಾ ಸಮಾಜಕ್ಕೆ ಒಂದು ಸ್ವಾಮಿಜೀ ಇರುತ್ತಾರೆ ಹಾಗಾಗಿ ನಮ್ಮ ಸಮಾಜಕ್ಕೆ ಆದಿಚುಂಚನಗಿರಿ ಸ್ವಾಮಿಜಿಯವರನ್ನು ಗುರುಗಳಾಗಿ ಮಾಡಿಕೊಂಡಿದ್ದೆವೆ. ಅವರ ನೇತ್ರತ್ವದಲ್ಲಿಯೇ ನಾವು ಈ ಕಾರ್ಯಕ್ರಮದ ಅಡಿಗಲ್ಲು ಸಮಾರಂಭ ನೇರೆವೆರಿಸಲ್ಲಿದೇವೆ ಎಂದರು.

RELATED ARTICLES  ಆಸ್ಪತ್ರೆಗೆ ಎಂದು ಬಂದ ಮಹಿಳೆ ನಾಪತ್ತೆ

ಈ ಸಂದರ್ಭದಲ್ಲಿ ದಿವಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ಗೌಡ, ಮತ್ತು ಹಾಲಕ್ಕಿ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿಗಳಾದ ಜಂಗ್ ಗೌಡ, ಗಿರಿಯ ಗೌಡ, ಪೇಶ ಗೌಡ, ಸುಬ್ರಾಯ ಗೌಡ, ದೇವು ಗೌಡ, ಪಕೀರ ಗೌಡ, ಹಾಗೂ ಊರ ನಾಗರಿಕರು ಪಾಲ್ಗೋಂಡಿದರು.