ಹೊನ್ನಾವರ : ತಾಲೂಕಿನ ಜ್ಯಾತ್ಯಾತೀತ ಜನತಾದಳದ ವತಿಯಿಂದ ಪಕ್ಷ ಸಂಘಟನೆ ಹಾಗೂ ಹೊಸ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಪಟ್ಟಣದ ಸೋಶಿಯಲ್ ಕ್ಲಬ್ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಹಿರಿಯ ಜೆಡಿಎಸ್ ಧುರೀಣ ಗಣಪಯ್ಯ ಗೌಡ ಮಾತನಾಡುತ್ತಾ ಕುಮಾರಸ್ವಾಮಿಯವರ ಆಡಳಿತದ ಸಾಧನೆಯನ್ನು ನಾವೆಲ್ಲರು ಮನಗಂಡು ಜನತೆ ಬಳಿ ತೆಗೆದುಕೊಂಡು ಹೋಗಬೇಕು. ಪಕ್ಷವನ್ನು ಅಧಿಕಾರವನ್ನು ತರುವಲ್ಲಿ ಶ್ರಮವಹಿಸಬೇಕು.ಎಂದರು.
ಜೆ ಡಿ ಎಸ್ ಮುಕಂಡರಾದ ಇನಾಯತುಲ್ಲಾ ಶಾಬಾಂದ್ರಿ ಮಾತನಾಡಿ 1000 ಕೋಟಿ ಅನುದಾನ ತಂದಿದ್ದು, ತೋರಿಸಿದರೆ ಅವಿರೋದ ಮಾಡುತ್ತಿರಾ ಎಂದು ಮಂಕಾಳ ವೈದ್ಯ ಚಾಲೇಂಜ ಮಾಡುತ್ತಿದ್ದಾರೆ ಆದರೆ ನಾನು ಚಾಲೇಂಜ ಮಾಡುತ್ತೇನೆ ಸಾವಿರ ಕೋಟಿ ತೋರಿಸಿ ಆದರೆ ಕೇಂದ್ರ ಸರ್ಕಾರದು ಆ ಹಣ ಈ ಹಣ ಕೆ ಎಸ್ ಆರ್ ಟಿ ಸಿ ಡಿಪೋದು ತಾಲೂಕಾ ಪಂಚಾಯತ ಕಚೇರಿ ಕಟ್ಟಿದು, ಮಿನಿ ವಿಧಾನಸೌದ ಇದೆಲ್ಲಾ ನಿಮಗೆ ಬರುವುದಿಲ್ಲಾ ನಿಮಿಂದ ಎಷ್ಟು ಬಂದಿದೆ ತೋರಿಸಿ ಎಂದು ಸವಾಲು ಹಾಕಿದರು . ತೋರಿಸಿದ್ದೆ ಹೌದಾದರೆ ನಾನು ನಿಮಗೆ ಸೇಲ್ಯುಟ್ ಹೋಡೆದು ಭಟ್ಕಳದಲ್ಲಿ ಸನ್ಮಾನ ಮಾಡಿತೆನೆ . ಸುಳ್ಳು ಹೇಳಿ ಜನರಿಗೆ ಮರಳ ಮಾಡಬೇಡಿ ಎಂದು ಮಾದ್ಯಮದ ಮೂಲಕ ಮಂಕಾಳ ವೈದ್ಯರಿಗೆ ಹೇಳುತ್ತಿದ್ದೇನೆ ನಿಮಗೆ ದಮ್ಮಿದ್ದರೆ ಮುಖಾಮುಖಿ ಭೇಟಿಯಾಗಿ ಎಂದು ಸವಾಲೂ ಹಾಕಿದರು.
ಜೆ ಡಿ ಎಸ್ ರಾಜ್ಯ ಕಾರ್ಯದರ್ಶಿ ಜಿ.ಎನ್.ಗೌಡ ಮಾತನಾಡಿ ಶಾಸಕರು 1000 ಕೋಟಿ ಅನುದಾನದ ಬಗ್ಗೆ ಪ್ರಶ್ನೆ ಮಾಡಿ ಆ ಬಗ್ಗೆ ದಾಖಲೆಯನ್ನು ಬಿಡುಗಡೆ ಮಾಡಿ ವಿನಾ ಕಾರಣ ಕಾಲಹರಣ ಬೇಡ. ನಾವು ನೀವು ದಾಖಲೆ ನೀಡಿ ಎಂದು ಹೇಳಿದ್ದೇವೆ . ನಿವು ಸಾವಿರ ಕೋಟಿ ಅನುದಾನ ತಂದಿರುವುದನ್ನು ನಿಮಗೆ ದಮ್ಮಿದ್ದರೆ ಜನರಿಗೆ ತೋರಿಸಿ ನೋಡೋಣ ಎಂದು ಸವಾಲು ಹಾಕಿದರು,
ಪಕ್ಷಕ್ಕೆ ಹಲವಾರು ಕಾರ್ಯಕರ್ತರನ್ನು ಬರಮಾಡಿಕೊಂಡು ಜವಾಬ್ದಾರಿ ಹಸ್ತಾಂತರ ನೇರವೇರಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿ.ಆರ್.ನಾಯ್ಕ, ಟಿ.ಟಿ.ನಾಯ್ಕ, ಪಾಂಡು ನಾಯ್ಕ, ರಾಜು ನಾಯ್ಕ, ಕೃಷ್ಣ ಗೌಡ, ಗೋವಿಂದ ಗೌಡ, ಇಬ್ರಾಹಿಂ ಸಾಬ್, ಇತರ ಕಾರ್ಯಕರ್ತರು ಉಪಸ್ದಿತರಿದ್ದರು. ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು