ಕುಮಟಾ : ಕಿವುಡುತನ ಹೊಂದಿದವರಿಗೆ ಸಹಾಯವಾಗುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕಿವಿಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸದೆ ನೇರವಾಗಿ ಹಲ್ಲಿನ ಮುಖಾಂತರ ಕಾರ್ಯನಿರ್ವಹಿಸುವ SIMPLE DUM MACHINE ಮಾದರಿಯನ್ನು ಮಂಗಳೂರಿನ ಕೇಂದ್ರ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಚಂದನ್ ಕುಬಾಲ್ ಕುಮಟಾ ಇವರು ಆವಿಷ್ಕಾರ ಮಾಡಿದ್ದಾರೆ .
ಸುರತ್ಕಲ್ ಸಂಶೋಧನಾ ಕೇಂದ್ರದಲ್ಲಿ (NIKT) ಹಾಗೂ ಉಡುಪಿಯಲ್ಲಿ ಜರುಗಿದ ರಾಜ್ಯಮಟ್ಟದ ವೈಜ್ಞಾನಿಕ ಮಾದರಿಯ ಪ್ರದರ್ಶನದಲ್ಲಿ ಇವರ ಮಾದರಿಯು ಪ್ರಥಮ ಸ್ಥಾನ ಪಡೆದುಕೊಂಡಿದೆ . ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಿ ಈ ಮಾದರಿಯ ಮಷಿನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಹಕರಿಸುವಂತೆ ಸುರತ್ಕಲ್ ಸಂಶೋಧನಾ ಕೇಂದ್ರದವರು ಚಂದನ್ ಕುಬಾಲರಿಗೆ ಆಹ್ವಾನ ನೀಡಿರುತ್ತಾರೆ .
ಚಂದನ್ ಕುಬಾಲ್ ಇವರು ಕುಮಟಾದ ಅಳ್ವೆದಂಡೆ ಗ್ರಾಮದ ನಿವಾಸಿಗಳಾದ ಶ್ರೀ ಜೈವಿಠಲ್ ಹಾಗೂ ಗೀತಾ ಕುಬಾಲ್ ರವರ ಸುಪುತ್ರರಾಗಿರುತ್ತಾರೆ . ಇವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ಜಯದೇವ ಬಳಗಂಡಿ ಮತ್ತು ಮಿತ್ರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ .