ಭಟ್ಕಳ : ನವ ಕರ್ನಾಟಕ ನಿರ್ಮಾಣಕ್ಕಾಗಿ 2ರಂದು ಬೆಂಗಳೂರಿನಿಂದ ಆರಂಭಗೊಂಡ ಬಿಜೆಪಿಯ ‘ಪರಿವರ್ತನಾ ಯಾತ್ರೆ’ಯು 13ರಂದು ಸಂಜೆ 6ಕ್ಕೆ ಭಟ್ಕಳ ತಾಲ್ಲೂಕು ಪ್ರವೇಶಿಸಿತು.

ರಾಜ್ಯದಲ್ಲಿ ಅತ್ಯಾಚಾರಿ ಮತ್ತು ಭ್ರಷ್ಟಚಾರಿಗಳು ಕೂಡಿ ಸರ್ಕಾರ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಿದ್ದರಾಮಯ್ಯನವರನ್ನು ಕಿತ್ತೆಸೆದು ಬಿಜೆಪಿ ಕೈಗೆ ಅಧಿಕಾರ ನೀಡಲಿದ್ದಾರೆ ಎಂದು ಪರಿವರ್ತನಾ ಯಾತ್ರೆಯ ನೇತೃತ್ವವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಅವರು ಸೋಮವಾರ ರಾತ್ರಿ ಇಲ್ಲಿನ ಗುರುಸುಧೀಂದ್ರ ಕಾಲೇಜು ಮೃದಾನದಲ್ಲಿ ನಿರ್ಮಿಸಿದ ಡ.ಯು.ಚಿತ್ತರಂಜನ್ ವೇದಿಕೆಯಲ್ಲಿ ಜರಗಿದ ಬೃಹತ್ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೇಸ್ ಪಕ್ಷ ಒಡೆದ ಮನೆಯಂತಾಗಿದ್ದು ಪಕ್ಷದ ಮುಖಂಡರು ಪರಸ್ಪರ ಕಚ್ಚಾಡುತ್ತಿದ್ದಾರೆ, ಪಕ್ಷದ ಅಧ್ಯಕ್ಷರನ್ನೇ ಚುನಾವಣೆಯಲ್ಲಿ ಸೋಲಿಸುವ ಷಡ್ಯಂತ್ರ ಮಾಡಿದ ಸಿದ್ದರಾಮಯ್ಯನವರನ್ನು ಕಾಂಗ್ರೇಸ್ಸಿಗರೆ ಕ್ಷಮಿಸಲ್ಲ ಎಂದ ಅವರು ನಾವೆಲ್ಲರೂ ಒಗ್ಗಟ್ಟಾಗಿ ಭ್ರಷ್ಟ ಸಿದ್ದರಾಮಯ್ಯನವರ ಸರ್ಕಾರವನ್ನು ಕಿತ್ತೆಸೆಯುವ ಪಣವನ್ನು ತೊಡಬೇಕಾಗಿದೆ ಎಂದು ಅವರು ಕರೆ ನೀಡಿದರು.

RELATED ARTICLES  ಅಪೂರ್ವ ಸಾಧಕನಿಗೆ ಅಭಿಮಾನದ ಸನ್ಮಾನ.

ಭಟ್ಕಳವು ಅಂತರಾಷ್ಟ್ರೀಯ ಭಯೋತ್ಪದಾನಾ ಕೇಂದ್ರವಾಗಿದ್ದು ಮುಂಬೈಯಲ್ಲಿ ಸ್ಪೋಟಗೊಂಡ ಆರ್.ಡಿ.ಎಕ್ಸ್ ಭಟ್ಕಳದಿಂದಲೇ ರವಾನೆಯಾಗಿದೆ. ಭಟ್ಕಳದಲ್ಲಿ ನಿರಂತರವಾಗಿ ಭಯೊತ್ಪದನಾ ಚಟುವಟಿಕೆಗಳು ನಡೆಯುತ್ತಿದ್ದು ಈ ಬಗ್ಗೆ ಇಲ್ಲಿನ ಜನತೆ ಎಚ್ಚರಿಕೆಯಿಂದಿರಬೇಕು. ಪಿ.ಎಫ್.ಐ ಕಾರ್ಯಕರ್ತರು ಭಯೋತ್ಪಾದಕರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್.ಐ.ಎ ಹೇಳಿದ್ದು ಇದರಿಂದಾಗಿ ಈ ಭಾಗದಲ್ಲಿ ಅಶಾಂತಿಯ ತಾಣವಾಗಿದೆ. ಸುಮಾರು ೨೭ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ ರಾಜ್ಯದ ಜನತೆ ಮುಂದಿನ ಐದು ವರ್ಷಗಳ ಕಾಲ ಸುಖವಾಗಿ ಜೀವಿಸಬಹುದು ಎಂದು ಅವರು ಹೇಳಿದರು. ಪಿಎಫ್‌ಐ ಎಸ್.ಡಿ.ಪಿಐ ತಲೆ ಎತ್ತಲು ಮುಖ್ಯ ಕಾರಣ ಸಿದ್ದರಾಮಯ್ಯನವರಾಗಿದೆ. ನಮ್ಮ ಆಡಳಿತ ಎಲ್ಲರಿಗೂ ಸಮಬಾಳು ಸಮಪಾಲು ನೀಡುತ್ತಿದೆ. ಜಾತಿಯ ಹೆಸರು ಹೇಳಿಕೊಂಡು ಜನರಲ್ಲಿ ವಿಷಬೀಜಬಿತ್ತುತ್ತಿರುವ ಸಿದ್ಧರಾಮಯ್ಯನವರನ್ನು ಅಧಿಕಾರ ಸಿಗದ ಹಾಗೆ ಮಾಡಬೇಕು ಎಂದು ಅವರು ಕೇಳಿಕೊಂಡರು. ಜಿಲ್ಲೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಾವು ಬಗೆಹರಿಸುತ್ತೇವೆ ಎಂದರು. ರಾಜ್ಯದಲ್ಲಿ ಕಾನೂನು ಸುವೆವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ನಾವು ರಾಜ್ಯದಲ್ಲಿ ಪರಿವರ್ತನೆಯನ್ನು ಬಯಸಿ ಯಾತ್ರೆಯನ್ನು ಕೈಗೊಂಡಿದ್ದೇನೆ. ಈ ದೇಶವನ್ನು ಕಾಂಗ್ರೇಸ್ ಮುಕ್ತ ದೇಶವನ್ನಾಗಿ ಮಾಡಬೇಕು ಈಗಾಗೇ ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಇನ್ನೂ ಗುಜರಾತ್, ಹಿಮಚಲ ಪ್ರದೇಶವನ್ನು ನಾವು ಗೆಲ್ಲುತ್ತೇವೆ. ರಾಜ್ಯವನ್ನೂ ಕಾಂಗ್ರೇಸ್ ಮುಕ್ತಗೊಳಿಸಬೇಕಾಗಿದೆ ಎಂದ ಅವರು ರಾಜ್ಯದಲ್ಲಿ ನಮ್ಮ ಆಚಾರ, ವಿಚಾರ, ಪರಂಪರೆಗೆ ಧಕ್ಕೆ ಎರಗಿದೆ ಎಂದರು.

RELATED ARTICLES  ಪಂ. ಷಡಕ್ಷರಿ ಗವಾಯಿ ಪುಣ್ಯ ಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಮಾರ್ ಬಂಗಾರಪ್ಪ, ಮಾತನಾಡಿದರು.

ವೇದಿಕೆಯಲ್ಲಿ ಸಂಸದ ಶ್ರೀರಾಮುಲು, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಶಿವಾನಂದಾ ನಾಯ್ಕ, ಕೋಟಾ ಶ್ರೀನಿವಾಸ ಪುಜಾರಿ, ಕೆ.ಜಿ.ನಾಯ್ಕ, ಜೆ.ಡಿ.ನಾಯ್ಕ, ಈಶ್ವರ್ ನಾಯ್ಕ ಭಾರತಿ ಶೇಟ್ಟಿ, ವಿಕ್ರಮಾರ್ಜುನ ಹೆಗಡೆ, ಮಾಜಿ ಸಚಿವ ಹರತಾಳ ಹಾಲಪ್ಪ ಮುಂತಾದವರು ಉಪಸ್ಥಿತರಿದ್ದರು.