8 ವರ್ಷಗಳಿಂದ ಸತತವಾಗಿ ಉಪಾಹಾರ ತ್ಯಜಿಸಿದ್ದ 45 ವರ್ಷದ ಚೀನಾ ಮಹಿಳೆಯೊಬ್ಬರ ದೇಹದಿಂದ ವೈದ್ಯರು ಬರೋಬ್ಬರಿ 200 ಕಲ್ಲುಗಳನ್ನು ಹೊರತೆಗೆದಿದ್ದಾರೆ.
ಚೆನ್ ಎಂಬ ಚೀನಾ ಮೂಲದ ಮಹಿಳಯೊಬ್ಬರಿಗೆ ಕಳೆದ 10 ವರ್ಷಗಳಿಂದಲೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದರೂ, ಶಸ್ತ್ರಚಿಕಿತ್ಸೆಗೆ ಭಯಪಟ್ಟು ಚಿಕಿತ್ಸೆ ಪಡೆದಿಲ್ಲ. ಕೆಲ ದಿನಗಳ ಹಿಂದಷ್ಟೇ ಮಹಿಳೆಗೆ ಸಹಿಸಲಾರದಷ್ಟು ನೋವು ಕಾಣಿಸಿಕೊಂಡಿದೆ. ನಂತರ ಮಹಿಳೆ ಗುವಾಂಗ್ಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆಯನ್ನು ಪರೀಕ್ಷೆಗೊಳಪಡಿಸಿದಾಗ ವೈದ್ಯರೇ ಆಕೆಯ ಸ್ಥಿತಿ ನೋಡಿ ದಿಗ್ಭ್ರಾಂತರಾಗಿದ್ದಾರೆ.
ಮಹಿಳೆಯ ಪಿತ್ತಕೋಶದಲ್ಲಿ ಬರೋಬ್ಬರಿ 200 ಕಲ್ಲುಗಳಿರುವುದು ಕಂಡುಬಂದಿದೆ. ಹಲವು ವರ್ಷಗಳಿಂದಲೂ ಪಿತ್ತಕೋಶಗಲ್ಲಿ ಕಲ್ಲುಗಳು ಬೆಳೆದಿದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಮಹಿಳೆಗೆ ಶಸ್ತ್ರಚಿಕಿತ್ಸೆಗೊಳಪಡಿಸಲು ಮುಂದಾದ ವೈದ್ಯರು 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ತೆಗೆದಿದ್ದಾರೆ. ಕೆಲ ಕಲ್ಲುಗಳು ಮೊಟ್ಟೆಗಾತ್ರದಷ್ಟು ದೊಡ್ಡದಾಗಿದ್ದವು ಎಂದು ವೈದ್ಯರು ಹೇಳಿದ್ದಾರೆ.