ನವದೆಹಲಿ: ಅಗ್ಗದ ದರದ 4 ಜಿ ಫೋನ್ ಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದ ರಿಲಯನ್ಸ್ ಜಿಯೋ ಬೆನ್ನಲ್ಲೇ ಏರ್ ಟೆಲ್ 4 ಜಿ ಫೋನ್ ಗಳನ್ನು ಬಿಡುಗಡೆ ಮಾಡುವ ಹಂತದಲ್ಲಿದೆ. ಇದೀಗ ಅದರದ್ದೇ ಹಾದಿಯಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಕೂಡಾ ಹೆಜ್ಜೆಯಿಟ್ಟಿದೆ.

RELATED ARTICLES  ವೈಯಕ್ತಿಕ ದ್ವೇಷ : ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ? ದೂರು - ಪ್ರತಿದೂರು ದಾಖಲು

ಮೈಕ್ರೋಮ್ಯಾಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಬಿಎಸ್ಎನ್ಎಲ್ ಹೊರತಂದಿರುವ ಭಾರತ್ 1 ಫೋನ್ ಈಗಾಗಲೇ ಬಿಡುಗಡೆಯಾಗಿದೆ. ಇದು ಕೂಡಾ 4 ಜಿ ಫೀಚರ್ ಹೊಂದಿದ್ದು, ಹೈ ಸ್ಪೀಡ್ ಇಂಟರ್ನೆಟ್ ಒದಗಿಸಲಿದೆ.

ಇದರ ಬೆಲೆ 2,200 ರೂ. ಆಗಿರಲಿದೆ. ಇಂದಿನಿಂದ ಮಾರುಕಟ್ಟೆಗೆ ಲಗ್ಗೆಯಿಡಲಿದೆ. 2.4 ಇಂಚು ಸ್ಕ್ರೀನ್ ಇರಲಿದ್ದು, ಕೀ ಪ್ಯಾಡ್ ಫೋನ್ ಇದಾಗಲಿದೆ. ಆದರೆ ಇದು ಆಂಡ್ರಾಯ್ಡ್ ಫೋನ್ ಆಗಿರುವುದಿಲ್ಲ. ಹೀಗಾಗಿ ಗೂಗಲ್ ಪ್ಲೇಸ್ಟೋರ್ ಲಭ್ಯವಿರುವುದಿಲ್ಲ. ಸಹಜವಾಗಿ ವ್ಯಾಟ್ಸಪ್ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ.

RELATED ARTICLES  ಗ್ರಾಮ ಪಂಚಾಯತಿ ಸದಸ್ಯೆ ಕೊಲೆ..?