ಕಾರವಾರ: ಎಂಜಿನ್ ಕೆಟ್ಟು ಸಮುದ್ರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿದ್ದ ಫಾಲಾಕ್ಷ ಎಂಬ ಮೀನುಗಾರಿಕೆ ನಡೆಸುವ ದೋಣಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿ, ಅಪಾಯಲ್ಲಿದ್ದ 8 ಮಂದಿ ಮೀನುಗಾರರಿಗೆ ನೆರವಾಗಿದ್ದಾರೆ.

ಮಧ್ಯದಲ್ಲಿ ಹಾಳಗಿ ನಿಂತಿದ್ದ ದೋಣಿಯನ್ನು ಸಿಬ್ಬಂದಿ ಸೋಮವಾರ ಬೆಳಿಗ್ಗೆ ಎಳೆದು ತಂದು ಕಾರವಾರ ಸಮೀಪದ ದೇವಗಡ ದ್ವೀಪದ ಬಳಿ ನಿಲ್ಲಿಸಿದ್ದಾರೆ. ಉಡುಪಿಯ ಮಲ್ಪೆ ಸಮುದ್ರದಲ್ಲಿ ಭಾನುವಾರ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯ ಎಂಜಿನ್ ಕೆಟ್ಟು, ಸಮುದ್ರದಲ್ಲಿ ಸಾಗದೇ ನಿಂತಿತ್ತು. ದೋಣಿಯಲ್ಲಿದ್ದ ಸುಮಾರು 8 ಮಂದಿ ಮೀನುಗಾರರು ಇದರಿಂದ ಭಯಭೀತಗೊಂಡಿದ್ದರು.

RELATED ARTICLES  ಕುಮಟಾದಲ್ಲೂ ಗೋ ಕಳ್ಳರ ಹಾವಳಿ: ಜನತೆಗೆ ಭೀತಿ ಹುಟ್ಟಿಸುತ್ತಿದೆ ಗೋ ಕಳ್ಳರ ಜಾಲ!

ಬಳಿಕ ಈ ಬಗ್ಗೆ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಸಂದೇಶ ರವಾನಿಸಿದಾಗ, ಗಸ್ತಿನಲ್ಲಿದ್ದ ಐಇಜಿಎಸ್ ಅಪೂರ್ವ ಎಂಬ ಕೋಸ್ಟ್ ಗಾರ್ಡ್ ನೌಕೆಯ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು. ಬಳಿಕ ದೋಣಿಯ ಎಂಜಿನ್ ಪರೀಕ್ಷಿಸಿದಾಗ ಅದು ಸುಟ್ಟುಹೋಗಿತ್ತು. ಹೀಗಾಗಿ ತಮ್ಮನ್ನು ದಡಕ್ಕೆ ಕರೆದೊಯ್ಯುವಂತೆ ಮೀನುಗಾರರು ಕೇಳಿಕೊಂಡ ಬಳಿಕ ಅವರನ್ನು ಕಾರವಾರಕ್ಕೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಕರೆ ತಂದಿದ್ದಾರೆ

RELATED ARTICLES  ಆರ್ಮಿ ಪರೇಡ್ ನಲ್ಲಿ ಸ್ಥಬ್ದ ಚಿತ್ರಕ್ಕೆ (TABLO) ಆಯ್ಕೆಯಾದ ಕುಮಟಾದ ಇಬ್ಬರು ಪ್ರತಿಭೆಗಳು