ಕುಮಟಾ: ಬಿ.ಜೆ.ಪಿ ಪಕ್ಷ ರಾಜ್ಯಾದ್ಯಂತ ಪರಿವರ್ತನಾ ರ್ಯಾಲಿ ಮೂಲಕ ರಾಜ್ಯ ಸಂಚರಿಸುತ್ತಾ ತಮ್ಮ ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತಿಳಸುವ ಮತ್ತು ರಾಜ್ಯ ಸರಕಾರದ ವಿಫಲತೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಹೌದು ಅದರಂತೆ ಇಂದು ಕುಮಟಾದ ಮಣಕಿ ಮೈಧಾನದಲ್ಲಿ ಪರಿವರ್ತನಾ ರ್ಯಾಲಿಯ ಮೂಲಕ ಕುಮಟಾ ಹೊನ್ನಾವರ ಕ್ಷೇತ್ರದ ಶಕ್ತಿ ಪ್ರದರ್ಶನ ನಡೆಯಿತು. ಮೊದಲಿಗೆ ಪರಿವರ್ತನಾ ರ್ಯಾಲಿ ರಥ ಕುಮಟಾಕ್ಕೆ ಆಗಮಿಸುತ್ತಿದ್ದಂತೆ ಅದಕ್ಕೆ ಅದ್ದೂರಿ ಸ್ವಾಗತವನ್ನು ಕುಮಟಾದ ಬಿ.ಜೆ.ಪಿಗರು ಕೊರಿದ್ರು. ಈ ರಥದಲ್ಲಿ ಕುಮಟಾ ಬಿ.ಜೆ.ಪಿ ಮುಖಂಡ ಸೂರಜ್ ನಾಯ್ಕ ಸೋನಿ ಕೂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ಹಾಗೂ ಸಂಸದೆ ಶೋಭಾ ಕರದ್ಲಂಜೆಯೊಂದಿಗೆ ರಥದಲ್ಲಿ ಆಗಮಿಸಿದರು.

ಕೊನೆಯಲ್ಲಿ ಸಭೆಗೆ ಆಗಮಿಸಿದ ಬೆ.ಜೆ.ಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಅವರು ನಾನೂ ಮುಖ್ಯಮಂತ್ರಿಯಾಗಲು ಈ ರ್ಯಾಲಿಯನ್ನು ಹಮ್ಮಿಕೊಂಡಿದಲ್ಲ. ರಾಜ್ಯದ ಮಿನುಗಾರ,ನೇಕಾರ,ರ್ಯೆತ,ಮಹಿಳೆಯರು ಸ್ವಾಭಿಮಾನದಿಂದ ಬಾಳಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಈ ಮೂಲಕ ಸ್ವಾಭಿಮಾನದ ಬದುಕು ನಮ್ಮ ರಾಜ್ಯದ ಜನರು ನಡೆಸುವುದುಕ್ಕೆ ಅನೂಕುಲವಾದ ಯೋಜನೆಯನ್ನು ರೂಪಿಸಬೇಕಾಗಿದೆ. ಅಲ್ಲದೆ ಈ ರಾಜ್ಯವನ್ನು ದುಸ್ಥಿತಿಗೆ ದುಡಿದ ಸಿದ್ದಾರಾಮಯ್ಯನನ್ನು ಹೋಡೆದೊಡಿಸಿ ಈ ರಾಜ್ಯದಲ್ಲಿ ಬಿ,ಜೆ.ಪಿ ಅಧಿಕಾರಕ್ಕೆ ಬರಬೇಕಾಗಿದೆ. ಈ ಮೂಲಕ ಸ್ವಚ್ಚ,ದಕ್ಷ,ಆಡಳಿತವನ್ನು ರಾಜ್ಯದ ಜನರಿಗೆ ನೀಡಬೇಕಾಗಿದೆ. ಇಂದಿನ ಸರಕಾರ ಬ್ರಷ್ಟಾಚಾರ,ಭಯೊತ್ಪಾಧನೆಗೆ ಕುಮ್ಮುಕ್ಕು ನೀಡುತ್ತಿದೆ ಎಂದರು. ಟೀಕೆಟ್ ಕೈ ತಪ್ಪಿದವರಿಗೆ ನಮ್ಮ ಸರಕಾರ ಬಂದರೆ ಉತ್ತಮವಾದ ಸ್ಥಾನ ಮಾನವನ್ನು ನೀಡುವ ಭರವಸೆ ನೀಡಿದ್ರು..

RELATED ARTICLES  ಮತ್ತೆ ತಲೆ ಎತ್ತಿದೆ ಬುರ್ಕಾ ವಿವಾದ: ಸವಾಲುಹಾಕಿ ಕಾಲೇಜಿಗೆ ಕೇಸರಿ ಶಲ್ಯ ಧರಿಸಿಕೊಂಡು ಬಂದ ವಿದ್ಯಾರ್ಥಿಗಳು.

ಅಅಅಷಷ 1

ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ಕೊಟ್ಟಂತ ಹಣವನ್ನು ಬಳಸಿಕೊಂಡು ಸುಮ್ಮನಾಗಿದೆ. ಕೇಂದ್ರ ಸರಕಾರದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಆದ್ದರಿಂದ ನಮ್ಮ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದ ಅವರು ರಾಜ್ಯ ಸರಕಾರದ ವಿರುದ್ದ ಗುಡುಗಿದ್ರು.

RELATED ARTICLES  ವಿನಾಯಕ ಬ್ರಹ್ಮೂರು ನಿರ್ದೇಶನದ 6ನೇ ಕಿರುಚಿತ್ರ “ಆಚೆ”ಯ ಚಿತ್ರೀಕರಣ ಪ್ರಾರಂಭ

ಇದೆ ವೇಳೆ ಮಾತನಾಡಿದ ನಮ್ಮ ಸಂಸದರು, ಕೇಂದ್ರ ಸಚಿವರು ಆದ ಅನಂತ ಕುಮಾರ ಅವರು ಎಂದಿನಂತೆ ಇಂದು ಕೂಡ ಜನರ ಹುಬ್ಬೆರಿಸುವಂತೆ ಮಾತನಾಡಿದ್ರು. ಸರಕಾರ ಮಾಡಿದ ಟಿಪ್ಪು ಜಯಂತಿ ಬಗ್ಗೆ ಮತ್ತು ಸಿದ್ದರಾಮಯ್ಯನವರ ಬಗ್ಗೆ ತಮ್ಮ ಬಿರುಸಿನ ಮಾತಿನ ಮೂಲಕ ಟೀಕಿಸಿದ್ರು.

ಈ ಕಾರ್ಯಕ್ರಮದಲ್ಲಿ ಶ್ರೀ ರಾಮುಲು,ಹಾರತಾಲ ಹಾಲಪ್ಪ,ಕುಮಾರ ಬಂಗಾರಪ್ಪವಿಶ್ವೇಶ್ವರ ಹೆಗಡೆ ಕಾಗೇರಿ,ಸೂರಜ್ ನಾಯ್ಕ,ನಾಗರಾಜ ನಾಯ್ಕ ತೊರ್ಕೆ,ಕೇ.ಜಿ,ನಾಯ್ಕ,ಜಿ,ಜಿ,ಹೆಗಡೆ,ವೆಂಕಟರಮಣ ಹೆಗಡೆ,ಸೇರಿದಂತೆ ಕುಮಟಾ ಹೊನ್ನಾವರದ ಅನೇಕ ಬಿ.ಜೆ.ಪಿ ಮುಖಂಡರು ವೇದಿಕೆ ಹಂಚಿಕೊಂಡಿದ್ರು. ಅಲ್ಲದೆ ಕುಮಟಾ ಮತ್ತು ಹೊನ್ನಾವರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ರು. ಸುಮಾರು 10 ಸಾವಿರಕ್ಕೂ ಹೆಚ್ಚೀನ ಸಾರ್ವಜನಿರು ರ್ಯಾಲಿಗೆ ಆಗಮಿಸಿದ್ದರು.